ಭಾರತದ ಆಟೋ ದಿಗ್ಗಜ ಹಾಗೂ ಜಗತ್ತಿನ ಅತಿ ದೊಡ್ಡ ಟ್ರಾಕ್ಟರ್ ಉತ್ಪಾದಕ ಮಹಿಂದ್ರಾ & ಮಹಿಂದ್ರಾ, ಬ್ರಿಟನ್‌ನ ಬಿಎಸ್‌ಎ ಮೋಟಾರ್ ಸೈಕಲ್ಸ್ ಬ್ರಾಂಡ್ ಅನ್ನು ಖರೀದಿ ಮಾಡಲು ಮುಂದಾಗಿದೆ.
1972ರಲ್ಲಿ ನಿಷ್ಕ್ರಿಯಗೊಂಡ ಬಿಎಸ್‌ಎ ಮೋಟಾರ್ ಸೈಕಲ್ಸ್‌ನ ಹಕ್ಕುಗಳನ್ನು ಮಹಿಂದ್ರಾ 2016ರಲ್ಲೇ ಖರೀದಿ ಮಾಡಿದೆ. ಆದರೆ ಉತ್ಪಾದನಾ ಸಾಮರ್ಥ್ಯವು ಅಲ್ಲಿಂದ ಆಚೆಗೆ ಇನ್ನೂ ಕೆಲಸ ಮಾಡಲು ಆರಂಭಿಸಿಲ್ಲ.
ತನ್ನ ಮರು ಆಗಮನದ ವಿಚಾರವನ್ನು ಬಿಎಸ್‌ಎ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಲು ಆರಂಭಿಸಿದೆ. ಮಹೀಂದ್ರಾದ ಮತ್ತೊಂದು ಅಂಗ ಸಂಸ್ಥೆ ಕ್ಲಾಸಿಕ್ ಲೆಜೆಂಡ್ಸ್ ಮೋಟಾರ್ ಸೈಕಲ್ ಕ್ಷೇತ್ರದಲ್ಲಿ ಮತ್ತೊಮ್ಮೆ ಸಕ್ರಿಯವಾಗಲಿದ್ದು, 2022ರ ಮಧ್ಯಭಾಗದಿಂದ ಮರು ಉತ್ಪಾದನೆ ಕಾಣಲಿದೆ.
ಆರೋಗ್ಯಕರ ಕೂದಲು ಬಯಸುವವರು ಮಾಡಬೇಡಿ ಈ ತಪ್ಪು
ಬಿಎಸ್‌ಎ ನಡೆದು ಬಂದ ಹಾದಿಯ ಅನೇಕ ಮೈಲುಗಲ್ಲುಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ಇದೀಗ ಕಂಪನಿಯು ಭಾರತೀಯ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಮತ್ತೊಮ್ಮೆ ಲಾಂಚ್ ಆಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
“ಲೆಜೆಂಡ್‌ನ ಮರುಆಗಮನ. ನಾವು ಸುಧಾರಿಸಿದ್ದೇವೆ, ಆದರೆ ನಮ್ಮ ಡಿಎನ್‌ಎ ಹಾಗೆಯೇ ಉಳಿದುಕೊಂಡಿದೆ,” ಎಂದು ಕ್ಯಾಪ್ಷನ್ ಒಂದನ್ನು ವಿಡಿಯೋಗೆ ಕೊಟ್ಟು, ’#BSAisBack’ ಟ್ಯಾಗ್ ಲಗತ್ತಿಸಲಾಗಿದೆ.