alex Certify BSA ಗೋಲ್ಡ್ ಸ್ಟಾರ್ vs ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್: ಗ್ರಾಹಕರಿಗೆ ಯಾವ ಬೈಕ್‌ ಬೆಸ್ಟ್‌ ? ಇಲ್ಲಿದೆ ಇವುಗಳ ನಡುವಿನ ‘ವ್ಯತ್ಯಾಸ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BSA ಗೋಲ್ಡ್ ಸ್ಟಾರ್ vs ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್: ಗ್ರಾಹಕರಿಗೆ ಯಾವ ಬೈಕ್‌ ಬೆಸ್ಟ್‌ ? ಇಲ್ಲಿದೆ ಇವುಗಳ ನಡುವಿನ ‘ವ್ಯತ್ಯಾಸ’

 

ಬ್ರಿಟನ್‌ನ ವಾಹನ ತಯಾರಕ ಕಂಪನಿ ಬಿಎಸ್ಎ ಹೊಸ ಬೈಕ್ ಗೋಲ್ಡ್ ಸ್ಟಾರ್ 650 ಅನ್ನು ಈಗಾಗ್ಲೇ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಬೈಕ್ 2021 ರಿಂದಲೂ ಜಾಗತಿಕ ಮಾರುಕಟ್ಟೆಯಲ್ಲಿದೆ, ಆದರೆ ಆಗಸ್ಟ್‌ 15ರಂದು ಭಾರತದಲ್ಲಿ ಬಿಡುಗಡೆಯಾಗಿದೆ. ಈ ಬೈಕ್‌ಗೆ ನೇರಸ್ಪರ್ಧಿಯೆಂದರೆ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650.

ಗೋಲ್ಡ್ ಸ್ಟಾರ್ 650 ಬೈಕ್‌ನ ಆರಂಭಿಕ ಬೆಲೆ 2.99 ಲಕ್ಷ ರೂಪಾಯಿ. ಈ ಮೋಟಾರ್‌ ಸೈಕಲ್‌ನ ಟಾಪ್ ಎಂಡ್ ಮಾಡೆಲ್‌ನ ಬೆಲೆ 3.35 ಲಕ್ಷ ರೂಪಾಯಿ ಇದೆ. ಇದಲ್ಲದೇ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೇಸ್ ಮಾಡೆಲ್ ಮಾರುಕಟ್ಟೆಯಲ್ಲಿ 3 ಲಕ್ಷದ 3 ಸಾವಿರ ರೂಪಾಯಿಗೆ ಲಭ್ಯವಿದೆ. ಇಂಟರ್‌ಸೆಪ್ಟರ್ 650 ಟಾಪ್ ಮಾದರಿಯ ಎಕ್ಸ್ ಶೋ ರೂಂ ಬೆಲೆ 3.31 ಲಕ್ಷ ರೂಪಾಯಿ.

ಎರಡೂ ಬೈಕುಗಳ ವಿನ್ಯಾಸ ಮತ್ತು ವೈಶಿಷ್ಟ್ಯತೆ

ಎರಡೂ ಬೈಕ್‌ಗಳ ವಿನ್ಯಾಸ ಬಹಳ ಆಕರ್ಷಕವಾಗಿದೆ. ಬಿಎಸ್‌ಎ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ರೆಟ್ರೊ ವಿನ್ಯಾಸದಲ್ಲಿ ಬರುತ್ತವೆ. ಗೋಲ್ಡ್ ಸ್ಟಾರ್ ವಿನ್ಯಾಸದಲ್ಲಿ ಕ್ಲಾಸಿಕ್ ಲುಕ್‌ ಇದೆ. ಆದರೆ ಇಂಟರ್‌ಸೆಪ್ಟರ್ 650 ರೋಡ್‌ಸ್ಟರ್ ವಿನ್ಯಾಸದೊಂದಿಗೆ ಲಭ್ಯವಿದೆ. ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದ್ದು, ಅಲಾಯ್ ಚಕ್ರಗಳನ್ನು ಅಳವಡಿಸಲಾಗಿದೆ.

ಎರಡೂ ಬೈಕ್‌ಗಳ ಎಂಜಿನ್‌ ವ್ಯತ್ಯಾಸ

BSA ಗೋಲ್ಡ್ ಸ್ಟಾರ್ 650 652 cc, ಲಿಕ್ವಿಡ್-ಕೂಲ್ಡ್, DOHC, 4-ವಾಲ್ವ್ ಎಂಜಿನ್ ಹೊಂದಿದೆ. ಈ ಬೈಕ್‌ನಲ್ಲಿ ಅಳವಡಿಸಲಾಗಿರುವ ಎಂಜಿನ್ 6,000 rpm ನಲ್ಲಿ 45hp ಪವರ್ ನೀಡುತ್ತದೆ ಮತ್ತು 4,000 rpm ನಲ್ಲಿ 55 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 648 ಸಿಸಿ, ಪ್ಯಾರಲಲ್-ಟ್ವಿನ್, 4-ಸ್ಟ್ರೋಕ್, ಸಿಂಗಲ್ ಓವರ್‌ಹೆಡ್ ಕ್ಯಾಮ್, ಏರ್/ಆಯಿಲ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ 7,150 rpm ನಲ್ಲಿ 47 bhp ಶಕ್ತಿಯನ್ನು ಒದಗಿಸುತ್ತದೆ ಮತ್ತು 5,250 rpm ನಲ್ಲಿ 52 Nm ನ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಗೋಲ್ಡ್ ಸ್ಟಾರ್‌ನಲ್ಲಿ 5-ಸ್ಪೀಡ್ ಟ್ರಾನ್ಸ್‌ಮಿಷನ್ ಅನ್ನು ಎಂಜಿನ್‌ನೊಂದಿಗೆ ಜೋಡಿಸಲಾಗಿದೆ. ಗೋಲ್ಡ್ ಸ್ಟಾರ್ 650 ಇಂಧನ ಟ್ಯಾಂಕ್ ಸಾಮರ್ಥ್ಯವು 12 ಲೀಟರ್ನಷ್ಟಿದೆ. ರಾಯಲ್ ಎನ್‌ಫೀಲ್ಡ್ ಬೈಕ್‌ನ ಎಂಜಿನ್ ಅನ್ನು 6-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಈ ಬೈಕ್ 13.7 ಲೀಟರ್ ಇಂಧನ ಸಾಮರ್ಥ್ಯದೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...