ಅಲಂಕಾರದ ಪ್ರಕ್ರಿಯೆಯಲ್ಲಿ ತಲೆ ಬಾಚುವುದೂ ಒಂದು. ಸಾಮನ್ಯವಾಗಿ ಮನೆಯಿಂದ ಹೊರಹೋಗುವ ಮುನ್ನ ತಲೆ ಬಾಚುತ್ತೇವೆ. ಮನೆಯಲ್ಲಿರುವ ಗೃಹಿಣಿಯರೂ ದಿನಕ್ಕೊಮ್ಮೆ ತಲೆ ಬಾಚುವುದನ್ನು ತಪ್ಪಿಸುವುದಿಲ್ಲ. ಒಂದೇ ಒಂದು ದಿನ ಬಾಚದೇ ಹೋದರೂ ಕೂದಲು ಸಿಕ್ಕು ಸಿಕ್ಕಾಗಿ, ತಲೆಯಲ್ಲಿ ತುರಿಕೆ ಉಂಟಾಗುತ್ತದೆ.
ತಲೆ ಬಾಚುವುದು ಕೇವಲ ಅಲಂಕಾರಕ್ಕಾಗಿ ಅಲ್ಲ. ಚೆಂದ ಕಾಣುವುದಷ್ಟೇ ಇದರ ಉಪಯೋಗವೂ ಅಲ್ಲ. ನಮಗೆ ತಿಳಿದೋ ತಿಳಿಯದೆಯೋ ತಲೆ ಬಾಚುವುದರ ಹಿಂದಿನ ಉಪಯೋಗ ತಿಳಿದರೆ ನೀವು ದಿನಕ್ಕೆ ಮೂರ್ನಾಲ್ಕು ಬಾರಿ ಕೈಯಲ್ಲಿ ಬಾಚಣಿಗೆ ಹಿಡಿಯಬಹದು.
ಬಾಚಣಿಗೆಯಿಂದ ಮೃದುವಾಗಿ ತಲೆ ಬಾಚುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಯಾವುದೇ ಕಾರಣಕ್ಕೂ ಧಾವಂತದಲ್ಲಿ ಒರಟಾಗಿ ತಲೆ ಬಾಚಬಾರದು. ಇದರಿಂದ ಕೂದಲಿನ ಬುಡಕ್ಕೆ ಹಾನಿಯುಂಟಾಗಿ ಕೂದಲು ಉದುರುವಿಕೆಗೆ ಕಾರಣವಾಗಬಹುದು.
ಆಗಾಗ ತಲೆ ಬಾಚುವುದರಿಂದ ಹೊಟ್ಟಿನ ಸಮಸ್ಯೆಗೆ ಕಡಿವಾಣ ಹಾಕಬಹುದು.
ಕೂದಲು ಹೆಚ್ಚಾಗಿ ಸಿಕ್ಕಾಗುತ್ತದೆ ಎನ್ನುವವರು ದಿನಕ್ಕೆ ಎರಡು ಬಾರಿಯಾದರೂ ಸ್ವಚ್ಚ ಬಾಚಣಿಗೆಯಿಂದ ತಲೆ ಬಾಚಲೇಬೇಕು.
ಮೃದುವಾಗಿ, ಸಾವಧಾನವಾಗಿ ಬಾಚುವುದರಿಂದ ತಲೆಗೆ ಒಳ್ಳೆಯ ಮಸಾಜ್ ಕೂಡ ಆಗುತ್ತದೆ.