
ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ರಾಸಲೀಲೆ ಇರುವ ಪೆನ್ ಡ್ರೈವ್ ಬಹಿರಂಗವಾದ ವಿಚಾರ ಈಗ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
ಪೆನ್ ಡ್ರೈವ್ ಬಹಿರಂಗದ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈವಾಡವಿದೆ ಎಂದು ಆರೋಪಿಸುತ್ತಿರುವ ಜಾತ್ಯತೀತ ಜನತಾದಳದ ನಾಯಕರು ಹಾಗೂ ಕಾರ್ಯಕರ್ತರು ಪ್ರಕರಣದ ತನಿಕೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಇಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್ ಪಕ್ಷ, ಬ್ರದರ್ ಸ್ವಾಮಿಗಳು ಹಗ್ಗವನ್ನು ತೋರಿಸಿ ಹಾವು ಎಂದು ನಂಬಿಸಲು ಸಾಹಸ ಮಾಡುತ್ತಿದ್ದಾರೆ.
ಡ್ರೈವರ್ ಕಾರ್ತಿಕ್ ಗೌಡ ಮಲೇಷ್ಯಾಕ್ಕೆ ಹೋಗಿದ್ದಾನೆ, ಯಾರೋ ಕಳಿಸಿದ್ದಾರೆ ಎಂದು ಬಾಯಿ ಬಡಿದುಕೊಂಡಿದ್ದರು.
ಆದರೆ ಕಾರ್ತಿಕ್ ಗೌಡ ಬಳಿ ಪಾರ್ಸ್ಪೋರ್ಟ್ ಇಲ್ಲವಂತೆ ಹಾಗೂ ಕಾರ್ತಿಕ್ ಗೌಡ ರಾಜ್ಯದಲ್ಲೇ ಇದ್ದು ಚಾನಲ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬ್ರದರ್ ಸ್ವಾಮಿಯ ಸುಳ್ಳಿನ ಫ್ಯಾಕ್ಟರಿ ಜೊತೆಗೆ ಬಿಜೆಪಿಯ ಫೇಕ್ ಫ್ಯಾಕರಿಯೂ ಸೇರಿ ಸುಳ್ಳಿನ ಸಾಮ್ರಾಜ್ಯ ಕಟ್ಟಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದೆ.