ಚಿತ್ರದುರ್ಗ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮೌಲ್ವಿ ಅಬ್ದುಲ್ ರೆಹಮಾನ್ ನನ್ನು ಚಿತ್ರದುರ್ಗ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮೂರು ವರ್ಷದಿಂದ ಬಾಲಕಿ ಕುರಾನ್ ಕಲಿಯಲು ಹೋಗುತ್ತಿದ್ದಳು. ಆಕೆಗೆ ದೆವ್ವ ಹಿಡಿದಿದೆ. ಮನೆಯಲ್ಲಿಯೇ ಪರಿಹಾರ ಕಾರ್ಯ ನಡೆಸಬೇಕು ಎಂದು ಮೌಲ್ವಿ ಆರೇಳು ತಿಂಗಳಿಂದ ವಾರಕ್ಕೊಮ್ಮೆ ಮನೆಗೆ ಹೋಗುತ್ತಿದ್ದ. ಮನೆಗೆ ಹೋದಾಗ ಬಾಲಕಿ ಮತ್ತು ಆಕೆಯ ಸಹೋದರನನ್ನು ಕೊಠಡಿಗೆ ಕರೆದುಕೊಂಡು ಹೋಗುತ್ತಿದ್ದ. ಬಾಲಕಿಯ ತಾಯಿಯನ್ನು ಕೋಣೆಯ ಹೊರಗೆ ಇರುವಂತೆ ಹೇಳುತ್ತಿದ್ದ.
ನಿನ್ನ ಸಹೋದರಿಗೆ ದೆವ್ವ ಮೆಟ್ಟಿದೆ. ದೈಹಿಕ ಸುಖ ಕೊಟ್ಟರೆ ಶಾಂತಿ ಸಿಗುತ್ತದೆ ಎಂದು ನಂಬಿಸಿ ತಂಗಿ ಮೇಲೆ ಅತ್ಯಾಚಾರ ಎಸಗಲು ಯುವಕನಿಗೆ ಪ್ರೇರೇಪಿಸುತ್ತಿದ್ದ. ಮೌಲ್ವಿ ಹೇಳಿದಂತೆ ಸಹೋದರ ತಂಗಿಯ ಮೇಲೆ ಅತ್ಯಾಚಾರ ಎಸಗಿದ್ದು, ಅದನ್ನು ಮೌಲ್ವಿ ವಿಡಿಯೋ ಮಾಡಿಕೊಂಡಿದ್ದಾನೆ. ನಂತರ ತಾನೂ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದಾನೆ.
ಆರೇಳು ತಿಂಗಳು ಇದೇ ರೀತಿಯಾಗಿದ್ದು, ಬಾಲಕಿ ಹೊಟ್ಟೆ ನೋವು ಎಂದು ಹೇಳಿದಾಗ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಪ್ರಕರಣ ಬೆಳಕಿಗೆ ಬಂದಿದ್ದು, ಚಿತ್ರದುರ್ಗ ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ಮೌಲ್ವಿ ಮತ್ತು ಸಂತ್ರಸ್ತೆಯ ಸಹೋದರನ ವಿರುದ್ಧ ದೂರು ದಾಖಲಿಸಿಕೊಂಡ ಚಿತ್ರದುರ್ಗ ಮಹಿಳಾ ಠಾಣೆ ಪೊಲೀಸರು ಆರೋಪಿ ಮೌಲ್ವಿಯನ್ನು ಬಂಧಿಸಿದ್ದಾರೆ.