
ಗದಗ: ಅಣ್ಣನೊಬ್ಬ ತನ್ನ ತಂಗಿಯನ್ನೇ ಹತ್ಯೆಗೈದು ಬಳಿಕ ಪೊಲೀಸ್ ಠಾಎಗೆ ಬಂದು ಶರಣಾಗಿರುವ ಘಟನೆ ಗದಗ ಜಿಲ್ಲೆಯ ಮುಂದರಗಿ ತಾಲೂಕಿನ ಅನ್ನದಾನೇಶ್ವರ ನಗರದಲ್ಲಿ ನಡೆದಿದೆ.
35 ಕಾಳಮ್ಮ ಕೊಲೆಯದ ಮಹಿಳೆ. ಈಶ್ವರಪ್ಪ ಕ್ಯಾದಿಗೆಹಳ್ಳಿ ತಂಗಿಯನ್ನೇ ಕೊಂದ ಅಣ್ಣ. ಆಸ್ತಿ ವಿಚಾರವಾಗಿ ಅಣ್ಣ-ತಂಗಿ ನಡುವೆ ಜಗಳ ನಡೆದು, ಗಲಾಟೆ ವಿಕೋಪಕ್ಕೆ ಹೋಗಿದ್ದು, ಕೋಪದ ಬರದಲ್ಲಿ ಈಶ್ವರಪ್ಪ ಕ್ಯಾದಿಗೆಹಳ್ಳಿ, ತಂಗಿ ಕಾಳಮ್ಮ ಳಿಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಆಕೆಯನ್ನು ನೆಲಕ್ಕೆ ಕೆಡವಿ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಂದಿದ್ದಾನೆ.
ಕಾಳಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತಂಗಿ ಸಾವನ್ನಪ್ಪುತ್ತಿದ್ದಂತೆ ಈಶ್ವರಪ್ಪ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ಮುಂದರಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.