ಉತ್ತರ ಪ್ರದೇಶದ ರಾಮಪುರದಲ್ಲಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾದ ಪ್ರಕರಣ ಒಂದು ತಿಂಗಳ ನಂತರ ಹೊಸ ತಿರುವು ಪಡೆದುಕೊಂಡಿದೆ. ಅಮ್ರೀನ್ ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ಮಹತ್ವದ ಪ್ರಗತಿಯನ್ನು ಸಾಧಿಸಿದ್ದು, ಆಕೆಯ ಸಾವಿಗೆ ಸಂಬಂಧಿಸಿದಂತೆ ಯುವತಿಯ ಸೋದರ ಮಾವ ಮತ್ತು ಸಂಬಂಧಿಯನ್ನು ಬಂಧಿಸಲಾಗಿದೆ.
ಅಕ್ಟೋಬರ್ 4 ರಂದು, ಅಜೀಮ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಗರಬ್ಬ ಗ್ರಾಮದಲ್ಲಿ ವಾಸಿಸುತ್ತಿದ್ದ 20 ವರ್ಷದ ಅಮ್ರೀನ್ ಸ್ಥಳೀಯ ಮಜಾರ್‌ಗೆ ಭೇಟಿ ನೀಡಲು ಹೋಗಿದ್ದು, ಆದರೆ ಹಿಂತಿರುಗಿರಲಿಲ್ಲ. ನಂತರ ಗ್ರಾಮದ ಸ್ಮಶಾನದಲ್ಲಿರುವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು.
ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದು ನಂಬಲಾಗಿತ್ತು, ಮರಣೋತ್ತರ ಪರೀಕ್ಷೆಯಲ್ಲಿ ಅಮ್ರೀನ್ ಕೊಲೆಯಾಗಿರುವುದು ತಿಳಿದುಬಂದಿದ್ದು, ನಂತರ ಆಕೆಯ ದೇಹವನ್ನು ನೇಣು ಹಾಕಲಾಗಿತ್ತು.
ಪೊಲೀಸರ ತನಿಖೆಯಲ್ಲಿ ಆಘಾತಕಾರಿ ವಿವರಗಳು ಹೊರಬಿದ್ದಿವೆ. ಅಮ್ರೀನ್ ತನ್ನ ಸೋದರ ಮಾವ ಮತ್ಲೂಬ್ ಮೇಲೆ ಪ್ರೇಮಭಾವ ಹೊಂದಿದ್ದು, ಆತ ತನ್ನ ಹೆಂಡತಿಯೊಂದಿಗಿನ ಆತ್ಮೀಯ ಕ್ಷಣಗಳ ವೀಡಿಯೊವನ್ನು ರೆಕಾರ್ಡ್ ಮಾಡಿ ಅದನ್ನು ಅಮ್ರೀನ್ ಗೆ ಕಳುಹಿಸಿದ್ದ. ಇದನ್ನು ದುರುಪಯೋಗಪಡಿಸಿಕೊಂಡ ಆಕೆ ವೀಡಿಯೊವನ್ನು ಹಲವಾರು ಗ್ರಾಮಸ್ಥರೊಂದಿಗೆ ಹಂಚಿಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದ ಮತ್ಲೂಬ್ ತನ್ನ ಸಂಬಂಧಿ ಜೊತೆ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.