ಚಿಕ್ಕಬಳ್ಳಾಪುರ: ಅಕ್ರಮ ಸಂಬಂಧವಿಟ್ಟುಕೊಂಡು ಪತ್ನಿಗೆ ಕಿರುಕುಳ ನೀಡುತ್ತಿದ್ದ ಭಾವನನ್ನು ಬಾಮೈದನೇ ಬರ್ಬರವಗೈ ಹತ್ಯೆಗೈದ ಘಟನೆ ಚಿಕ್ಕಬಳ್ಳಾಪುರದ ಮೊಟ್ಲೂರು ಕ್ರಾಸ್ ಬಳಿ ನಡೆದಿದೆ.
ಗೌಚೇನಹಳ್ಳಿ ನಿವಾಸಿ ಸುಭಾಷ್ (35) ಕೊಲೆಯಾದ ವ್ಯಕ್ತಿ. ಅನೈತಿಕ ಸಂಬಂಧವಿಟ್ಟುಕೊಂಡು ಪತ್ನಿಗೆ ಕಿರುಕುಳ ನೀಡುತ್ತಿದ್ದ ಸುಭಾಷ್ ನನ್ನು ಬಾಮೈದ್ 5 ಜನ ಸ್ನೇಹಿತರ ಜೊತೆಗೂಡಿ ಅಟ್ಟಾಡಿಸಿಕೊಂಡು ಬಂದು ಕೊಲೆ ಮಡಿದ್ದಾನೆ. ಮಚ್ಚು, ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ
ಮನೋಜ್ ಭಾವನನ್ನೇ ಕೊಲೆಗೈದ ಬಾಮೈದ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.