ಮೇ ತಿಂಗಳಲ್ಲಿ ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಸಿಂಹಳೀಯ ಹಾಡಾದ ಮಣಿಕೆ ಮಾಗೆ ಹಿತೆಯನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದಾಗ, ಈ ಹಾಡು ಇಷ್ಟೊಂದು ಬಿರುಗಾಳಿ ಎಬ್ಬಿಸಬಹುದು ಎಂಬುದು ಬಹುಶಃ ಅವರಿಗೆ ತಿಳಿದಿರಲಿಕ್ಕಿಲ್ಲ.
ಹಾಡು ಬಿಡುಗಡೆಯಾಗಿ ಇಷ್ಟು ತಿಂಗಳುಗಳು ಕಳೆದರೂ ಸಹ ಹಾಡಿನ ಕ್ರೇಜ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯರವರೆಗೆ ಎಲ್ಲರೂ ಈ ಭಾವಪೂರ್ಣ ಹಾಡಿನ ಮೋಡಿಗೆ ಒಳಗಾಗಿದ್ದಾರೆ ಅಂತಾ ಹೇಳಿದ್ರೆ ಅತಿಶಯೋಕ್ತಿಯಲ್ಲ.
ಸಾಕಷ್ಟು ಮಂದಿ ಈ ಹಾಡಿಗೆ ಭಿನ್ನ-ವಿಭಿನ್ನವಾಗಿ ನೃತ್ಯ ಮಾಡಿದ್ದಾರೆ. ಇದೀಗ, ಸಹೋದರ ಮತ್ತು ಸಹೋದರಿ ಮಣಿಕೆ ಮಾಗೆ ಹಿತೆಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಪ್ಪು ಬಣ್ಣದ ಉಡುಗೆ ತೊಟ್ಟ ಇಬ್ಬರು ಒಡಹುಟ್ಟಿದವರು ಈ ಹಾಡಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಛವಿ ಅಗರ್ವಾಲ್ ಎಂಬುವವರು ಈ ವಿಡಿಯೋ ಹಂಚಿಕೊಂಡಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಣ್ಣ-ತಂಗಿ ಮಾಡಿರುವ ನೃತ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://youtu.be/_UUAzbWJI1I