ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಚಿಹ್ನೆ ಪೊರಕೆ ಮರೆಮಾಚಲು ಆಯೋಗ ಮುಂದಾಗಿದೆ. ಮತದಾನದ ದಿನ ಮತಗಟ್ಟೆಗಳಲ್ಲಿ ಪೊರಕೆಗೆ ಗೇಟ್ ಪಾಸ್ ನೀಡಲಾಗುತ್ತದೆ.
ಅಂದ ಹಾಗೆ, ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಪಕ್ಷದ ಚಿಹ್ನೆಯಾದ ಪೊರಕೆ ಮತ್ತು ಅದರ ಚಿತ್ರ ಎಲ್ಲೂ ಪ್ರಮುಖವಾಗಿ ಜನರ ಕಣ್ಣಿಗೆ ಕಾಣಿಸದಂತೆ ಮರೆಮಾಚಬೇಕಾದ ಅನಿವಾರ್ಯತೆ ಚುನಾವಣೆ ಆಯೋಗಕ್ಕೆ ಎದುರಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಪೊರಕೆ ಮತ್ತು ಅದರ ಚಿಹ್ನೆ ಕಾಣಿಸಿದಂತೆ ಆಯೋಗ ಎಚ್ಚರಿಕೆ ವಹಿಸುವುದು ಸವಾಲಿನ ಕೆಲಸವಾಗುತ್ತದೆ. ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಹೊಂದಿದ್ದು, ಪೊರಕೆ ಚಿಹ್ನೆಯನ್ನು ಮರೆಮಾಚಲು ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಚುನಾವಣೆ ನಿಯಮದ ಪ್ರಕಾರ, ಮತದಾರರ ಮೇಲೆ ವಸ್ತುಗಳನ್ನು ಮರೆಮಾಚಬೇಕಿದೆ.
ಬಿಎಸ್ಪಿ ಆನೆ ಚಿಹ್ನೆ ಹೊಂದಿದೆ ಎಂಬ ಕಾರಣಕ್ಕೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಎಲ್ಲಾ ಆನೆಗಳ ಪ್ರತಿಮೆಗಳನ್ನು ಮುಚ್ಚಲಾಗಿತ್ತು. ಈಗ ಸ್ವಚ್ಛತೆಗೆ ಅಗತ್ಯವಾಗಿ ಬೇಕಾದ ಪೊರಕೆಯನ್ನು ಮರೆಮಾಚುವ ಮೂಲಕ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.