ದೇಹದ ಎಲ್ಲ ಭಾಗಗಳು ಆರೋಗ್ಯವಾಗಿರಬೇಕು. ನಮ್ಮ ದೇಹದ ಒಂದು ಭಾಗದಲ್ಲಿ ಸಮಸ್ಯೆಯಿದ್ದರೂ ನಾವು ಸಮಸ್ಯೆ ಎದುರಿಸಬೇಕಾಗುತ್ತದೆ. ಇಂಗ್ಲೆಂಡ್ನ ಸೌತ್ ಶೀಲ್ಡ್ಸ್ ನಿವಾಸಿಯೊಬ್ಬಳ ಸಮಸ್ಯೆ ವಿಚಿತ್ರವಾಗಿದೆ. ಆಕೆ ಎರಡೂ ಸ್ತನಗಳ ಗಾತ್ರ ಹೆಚ್ಚಿದೆ. ಇದು ಆಕೆಯ ತೊಂದರೆಗೆ ಕಾರಣವಾಗಿದೆ.
ಲಾರಾ ಹೋವೆಸ್, ದೊಡ್ಡ ಸ್ತನಗಳಿಂದಾಗಿ ಅಸಮಾಧಾನಗೊಂಡಿದ್ದಾಳೆ. ಸ್ತನ ದೊಡ್ಡದಾಗಿರುವ ಕಾರಣ ಎದ್ದು ಕುಳಿತುಕೊಳ್ಳುವುದು ಕಷ್ಟವಾಗಿದೆ. ಶಸ್ತ್ರಚಿಕಿತ್ಸೆ ಮೂಲಕ ಸ್ತನದ ಗಾತ್ರ ಕಡಿಮೆ ಮಾಡಿಕೊಳ್ಳಲು ಲಾರಾ ಬಯಸುತ್ತಿದ್ದಾಳೆ. ಆದ್ರೆ ಶಸ್ತ್ರಚಿಕಿತ್ಸೆಗೂ ಸಮಸ್ಯೆಯಿದೆ. ಆಕೆ ತೂಕ ಕಡಿಮೆ ಮಾಡಿಕೊಂಡಲ್ಲಿ ಮಾತ್ರ ಸ್ತನದ ಶಸ್ತ್ರಚಿಕಿತ್ಸೆ ಸಾಧ್ಯವೆಂದು ವೈದ್ಯರು ಹೇಳಿದ್ದಾರೆ.
ಲಾರಾ ವೃತ್ತಿಯಲ್ಲಿ ಮದುವೆ ಫೋಟೋಗ್ರಾಫರ್. ತೂಕ ಕಡಿಮೆ ಮಾಡಿಕೊಳ್ಳಲು ಲಾರಾಗೆ ವ್ಯಾಯಾಮ ಮಾಡಲು ಸಾಧ್ಯವಾಗ್ತಿಲ್ಲ. ಸ್ತನದ ಗಾತ್ರ ದೊಡ್ಡದಿರುವ ಕಾರಣ ಎದ್ದು ನಿಲ್ಲುವುದು ಕಷ್ಟ. ಇದ್ರಿಂದ ದೇಹದಲ್ಲಿ ಕೆಲ ಗಾಯಗಳಾಗಿವೆ. ಶಾಲಾ ದಿನಗಳಿಂದಲೇ ಸಮಸ್ಯೆ ಎದುರಿಸುತ್ತಿರುವ ಲಾರಾಗೆ 21 ವರ್ಷ. ಸ್ತನಗಳ ಕಾರಣದಿಂದಲೇ ಲಾರಾ 11ನೇ ವರ್ಷದಲ್ಲಿಯೇ ಶಾಲೆ ಬಿಟ್ಟಿದ್ದಾಳೆ.
ಶಸ್ತ್ರಚಿಕಿತ್ಸೆಗಾಗಿ ಲಾರಾ ಫಂಡ್ ಕಲೆಕ್ಟ್ ಮಾಡ್ತಿದ್ದಾಳೆ. ಆಕೆಗೆ 8 ಸಾವಿರ ಯುಕೆ ಪೌಂಡ್ ಬೇಕಾಗಿದ್ದು ಈಗ 6225 ಪೌಂಡ್ ಸಂಗ್ರಹವಾಗಿದೆ.