25 ವರ್ಷದ ಬ್ರಿಟಿಷ್ ಯುವತಿಯೊಬ್ಬರು ಬಲ್ಗೇರಿಯಾಕ್ಕೆ ತನ್ನ ವಿಹಾರ ಪ್ರವಾಸದಲ್ಲಿ ಆಘಾತವನ್ನು ಎದುರಿಸಿದ್ದಾರೆ. ಲಂಡನ್ನ ಬ್ಯೂಟಿಷಿಯನ್ ಸಿರಿನ್ ಮುರಾದ್ ಬಿಸಿಲಿಗೆ ಮುಖಕೊಟ್ಟು ವಿಶ್ರಾಂತಿ ಮಾಡಿದ ನಂತರ ಆಕೆಯ ವಿರೂಪಗೊಂಡ ಚರ್ಮ ಕಾಣಿಸಿಕೊಂಡಿದ್ದು, ಆ ಮುಖದ ಚಿತ್ರಗಳು ಜಾಲತಾಣದಲ್ಲಿ ಆಘಾತ ಮತ್ತು ಕಳವಳಕ್ಕೆ ಕಾರಣವಾಗಿವೆ.
ಮುರಾದ್ ಬಲ್ಗೇರಿಯಾದ ಸನ್ನಿ ಬೀಚ್ನ ಕೊಳದ ಪಕ್ಕದಲ್ಲಿ ತನ್ನ ಮುಖದ ಮೇಲೆ ಯಾವುದೇ ಸನ್ಸ್ಕ್ರೀನ್ ಬಳಸದೆ ಸೂರ್ಯನಿಗೆ ಮುಖಕೊಟ್ಟು ಮಲಗಿದ್ದರು. ಆಗ ಆಕೆಯ ಮುಖದಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿತ್ತಂತೆ. ಆದರೆ ಹೆಚ್ಚು ಗಮನ ಕೊಡಲಿಲ್ಲ. ಸೂರ್ಯನಿಗೆ ಮುಖ ನೀಡಿ 30 ನಿಮಿಷಗಳ ನಿದ್ದೆ ಮಾಡಿದ ನಂತರ, ಮುರಾದ್ ಮುಖದ ಮೇಲೆ ‘ಪ್ಲಾಸ್ಟಿಕ್ ಚರ್ಮ’ದಂತೆ ಒಂದು ಲೇಯರ್ ಎದ್ದಿತ್ತು.
ಮೊದಲಿಗೆ ಅದು ನಿಜವಾಗಿಯೂ ಏನೂ ಅನಿಸಲಿಲ್ಲ, ನಾನು ಅದರ ಮೇಲೆ ಒತ್ತಡ ಹೇರಿದಾಗ ಸ್ವಲ್ಪ ನೋಯುತ್ತಿತ್ತು ಎಂದು ಮುರಾದ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಕೆಲವು ದಿನಗಳ ನಂತರ, ಅವಳ ಮುಖದ ಸಿಪ್ಪೆ ಸುಲಿಯಲು ಪ್ರಾರಂಭಿಸಿತು, ಅದರ ಕೆಳಗೆ ಟ್ಯಾನ್ ಮಾಡಿದ ಚರ್ಮದ ತೇಪೆಗಳನ್ನು ಬಿಟ್ಟಿತು. “ಇದು ಮರುದಿನ ನಿಜವಾಗಿಯೂ ನೋವುಂಟು ಮಾಡಿತು. ಆದರೆ ಅದು ಸಿಪ್ಪೆ ಸುಲಿಯಲು ಪ್ರಾರಂಭಿಸಿದ ಬಳಿಕ ಈಗ ನಾನು ಹೆಚ್ಚು ಉತ್ತಮವಾಗಿದ್ದೇನೆ ಎಂದಿದ್ದಾರೆ.
ಮುರಾದ್ ಈಗ ಸೂರ್ಯನಿಗೆ ಮುಖ ಕೊಡುವ ಮೊದಲು ಯಾವಾಗಲೂ ಸನ್ಸ್ಕ್ರೀನ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಉತ್ಸುಕರಾಗಿದ್ದಾರೆ. ಹೆಚ್ಚು ಬಿಸಿಲಿನಿಂದ ಸುಟ್ಟ ಚರ್ಮವು ಸಾಮಾನ್ಯವಾಗಿ ವಿಕಾರಕ್ಕೆ ಕಾರಣವಾಗುತ್ತದೆ.