ಬ್ರಿಟನ್ ಮಹಿಳೆಯೊಬ್ಬಳು ಏಲಿಯನ್ಸ್ ಬಗ್ಗೆ ಆಘಾತಕಾರಿ ಮಾಹಿತಿ ನೀಡಿದ್ದಾಳೆ. ಏಲಿಯನ್ಸ್ ನನ್ನನ್ನು ಅನೇಕ ಬಾರಿ ಅಪಹರಿಸಿದೆ ಎಂದು ಮಹಿಳೆ ಹೇಳಿದ್ದಾಳೆ. ಯುಎಫ್ಒನಲ್ಲಿ ಕುಳಿತು ಬಂದ ಏಲಿಯನ್ಸ್ ಅನೇಕ ಬಾರಿ ಬೆಡ್ ರೂಮಿನಿಂದ ಮಹಿಳೆಯನ್ನು ಹೊತ್ತೊಯ್ದಿದ್ದಾಳಂತೆ.
ಈ ವಿಚಿತ್ರ ಹೇಳಿಕೆ ನೀಡಿರುವ ಮಹಿಳೆ ಹೆಸರು ಅಬ್ಬಿ ಬೆಲ್ಲಾ. ಏಲಿಯನ್ಸ್ ಅವಳಿಗೆ ಯಾವುದೇ ಹಾನಿ ಮಾಡಿಲ್ಲವಂತೆ. ನನ್ನನ್ನು ಅಪಹರಿಸಿದ ವೇಳೆ ಯಾರೂ ನೋಡಿಲ್ಲ. ಹಾಗಾಗಿ ಯಾರೂ ನಾನು ಹೇಳಿದ ಮಾತನ್ನು ನಂಬುವುದಿಲ್ಲವೆಂದು ಆಕೆ ಹೇಳಿದ್ದಾಳೆ. ಸುಮಾರು 50ಕ್ಕೂ ಹೆಚ್ಚು ಬಾರಿ ಏಲಿಯನ್ಸ್ ಮಹಿಳೆಯನ್ನು ಅಪಹರಿಸಿದೆಯಂತೆ. ಅನೇಕ ಬಾರಿ ನನ್ನನ್ನು ಯುಎಫ್ಒನಲ್ಲಿ ಕರೆದೊಯ್ದಿದೆ ಎಂದು ಮಹಿಳೆ ಹೇಳಿದ್ದಾಳೆ.
ಅಬ್ಬಿ ಬೆಲ್ಲಾಗೆ ಈಗ 50 ವರ್ಷ. ಆಕೆ ಕೈನಲ್ಲಿ ಅನೇಕ ಗುರುತುಗಳಿವೆ. ತನಗೆ ಏಲಿಯನ್ಸ್ ಮೇಲೆ ಪ್ರೀತಿಯಾಗಿದೆ. ನನಗೆ ಭೂಮಿ ಮೇಲಿರುವ ಪುರುಷರು ಇಷ್ಟವಾಗುವುದಿಲ್ಲ. ಏಲಿಯನ್ಸ್ ಒಳ್ಳೆಯವರು. ಇಷ್ಟು ದಿನ ಅಪಹರಿಸಿದ್ರೂ ನನಗೆ ಯಾವುದೇ ಹಾನಿ ಮಾಡಿಲ್ಲವೆಂದು ಮಹಿಳೆ ಹೇಳಿದ್ದಾಳೆ. ಮತ್ತೆಂದು ಏಲಿಯನ್ಸ್ ನನ್ನನ್ನು ಅಪಹರಿಸುತ್ತದೆ ಎಂದು ನಾನು ಕಾಯ್ತಿದ್ದೇನೆಂದು ಮಹಿಳೆ ಹೇಳಿದ್ದಾಳೆ. ಮನುಷ್ಯರಂತೆ ಕಾಣುವ ಏಲಿಯನ್ಸ್ ಎತ್ತರ ಹಾಗೂ ಶಕ್ತಿಶಾಲಿಯಾಗಿರುತ್ತದೆ ಎಂದು ಮಹಿಳೆ ಹೇಳಿದ್ದಾಳೆ.