ಸರ‍್ರೆ ಕೌಂಟಿಯ ಬೀದಿಯೊಂದರಲ್ಲಿ ಪರ್ಸ್ ಕಳ್ಳನೊಬ್ಬನಿಗೆ ಗೂಸಾ ಕೊಡುತ್ತಿರುವ ತನ್ನ ಪತಿಯ ವಿಡಿಯೋ ಸೆರೆ ಹಿಡಿದ ಮಹಿಳೆಯೊಬ್ಬರು ಟಿಕ್‌ಟಾಕ್‌ನಲ್ಲಿ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾರೆ.
ನಿಕೋಲ್ ಹೆಸರಿನ ಈ ಮಹಿಳೆ ಟಿಕ್‌ಟಾಕ್‌ನಲ್ಲಿ ವಿಡಿಯೋ ಶೇರ್ ಮಾಡಿದ ಬಳಿಕ ಆಕೆಯ ಪತಿಯನ್ನು ’ಹೀರೋ ಪತಿ’ ಎಂದು ನೆಟ್ಟಿಗರು ಕರೆಯುತ್ತಿದ್ದಾರೆ.
ಸಮ್ಮತಿ ಲೈಂಗಿಕ ಕ್ರಿಯೆ ವೈವಾಹಿಕ ಜೀವನದ ಭಾಗವಾದರೂ ಪತ್ನಿ ಇಚ್ಛೆ ವಿರುದ್ಧದ ಸೆಕ್ಸ್ ಅತ್ಯಾಚಾರ; ಹೈಕೋರ್ಟ್ ಮಹತ್ವದ ತೀರ್ಪು
ಸರ‍್ರೆಯ ಫರ್ಹಾಮ್‌ನ ಬೀದಿಯೊಂದರಲ್ಲಿ ಹೋಗುತ್ತಿದ್ದ ಈ ದಂಪತಿಯ ಕಣ್ಣಿಗೆ ಪರ್ಸ್ ಒಂದನ್ನು ಕದ್ದು ಓಡಿಹೋಗುತ್ತಿದ್ದ ಮುಸುಕುಧಾರಿಯೊಬ್ಬ ಬಿದ್ದಿದ್ದಾನೆ. ಕೂಡಲೇ ಪತಿ ಡೆರ‍್ರೆನ್ ಬ್ರೌನ್ಸನ್ ತಮ್ಮ ಕಾರನ್ನು ನಿಲ್ಲಿಸಿ ಆತನನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಕಳ್ಳನಿಂದ ಪರ್ಸ್ ಕಿತ್ತುಕೊಂಡ ಡೆರ‍್ರೆನ್ ಅದನ್ನು ಅಸಲಿ ವಾರಸುದಾರರಿಗೆ ಒಪ್ಪಿಸಿದ್ದಾರೆ.