ಒಂದೇ ಬಾರಿಗೆ ಎರಡು – ಮೂರು ಮಕ್ಕಳಿಗೆ ಮಹಿಳೆಯರು ಜನ್ಮ ನೀಡುವುದು ಹೊಸ ವಿಷಯವೇನಲ್ಲ. ಅಪರೂಪವಾದರೂ ಸಹ 3-4 ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡುವ ಮಹಿಳೆಯರ ಬಗ್ಗೆ ಆಗಾಗ ಕೇಳುತ್ತಲೇ ಇರುತ್ತವೆ.
ಬ್ರಿಟನ್‌ನ ಜೀನಾ ಹೆಸರಿನ ಈ ಮಹಿಳೆ ಗರ್ಭಧಾರಣೆ ವೇಳೆ ಪದೇ ಪದೇ ತಲೆನೋವು ಅನುಭವಿಸುತ್ತಿದ್ದ ಕಾರಣ ರಾತ್ರಿ ವೇಳೆ ಮಲಗಲು ಭಾರೀ ಕಷ್ಟ ಪಡುತ್ತಿದ್ದರು. ಸ್ಕ್ಯಾನಿಂಗ್ ಮಾಡುವ ಮುನ್ನವೇ ತಮ್ಮ ಗರ್ಭದಲ್ಲಿ ಒಂದಕ್ಕಿಂತ ಹೆಚ್ಚಿನ ಮಕ್ಕಳು ಇವೆ ಎಂದು ಮಹಿಳೆಗೆ ಖಾತ್ರಿಯಾಗಿತ್ತು.
ಸ್ಕ್ಯಾನಿಂಗ್ ಮಾಡಿದ ವೇಳೆ ತನ್ನ ಗರ್ಭದಲ್ಲಿ ಒಂದಲ್ಲ, ಎರಡಲ್ಲ ಮೂರು ಮಕ್ಕಳಿರುವುದು ಪತ್ತೆಯಾಗಿದ್ದು, ಮೂವರು ಗಂಡು ಮಕ್ಕಳಿಗೆ ಈಕೆ ಜನ್ಮ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಗರ್ಭದಲ್ಲಿರುವ ಮೂರೂ ಮಕ್ಕಳು ಒಂದೇ ಹೊಕ್ಕುಳ ಬಳ್ಳಿ ಹಂಚಿಕೊಂಡಿದ್ದಾರೆ ಎಂಬ ವಿಷಯವನ್ನು ಕಂಡು ಖುದ್ದು ವೈದ್ಯರೂ ಸಹ ಡೆಲಿವರಿ ವೇಳೆ ದಂಗು ಬಡಿದಿದ್ದಾರೆ. ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳೆಲ್ಲಾ ಹೊಕ್ಕುಳ ಬಳ್ಳಿಯ ಮೂಲಕವೇ ತಲುಪುತ್ತವೆ. ವೈದ್ಯರ ಪ್ರಕಾರ ಇದೊಂದು ಅತ್ಯಪರೂಪದ ಪ್ರಸಂಗವಾಗಿದ್ದು, ಕೋಟಿಯಲ್ಲಿ ಒಮ್ಮೆ ಮಾತ್ರವೇ ಹೀಗೆ ಆಗುತ್ತದೆ.