ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳುವುದು ಎಂದರೆ ಹಲವರಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಬ್ರಿಟಿಷ್ ಮಹಿಳೆಯೊಬ್ಬಳಿಗೆ ಇದೇ ಮುಳುವಾಗಿದೆಯಂತೆ! ಅತಿ ಹೆಚ್ಚು ಟ್ಯಾಟೂ ಹಾಕಿಸಿಕೊಂಡಿರುವ ಕಾರಣಕ್ಕೆ ತನಗೆ ಪಬ್ಗೆ ಪ್ರವೇಶವನ್ನು ನಿರಾಕರಿಸಿದ್ದಾಳೆ ಎಂದು ಅವರು ಹೇಳಿಕೊಂಡಿದ್ದಾಳೆ.
ಟ್ಯಾಟೂ ಹಾಕಿಸಿಕೊಂಡ ಮುಖವನ್ನು ಹೊಂದಿರುವ ಏಳು ಮಕ್ಕಳ ತಾಯಿ ಮೆಲಿಸ್ಸಾ ಸ್ಲೋನೆ, ಪಬ್ಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದ ಕಾರಣ ತನ್ನ ಕ್ರಿಸ್ಮಸ್ ಅನ್ನು ಹಾಳು ಮಾಡಲಾಗಿದೆ ಎಂದು ಪೋಸ್ಟ್ ಮಾಡಿದ್ದು, ಇದು ವೈರಲ್ ಆಗಿದೆ. ಅಂದ ಹಾಗೆ ಈಕೆ ಸಂಪೂರ್ಣ ದೇಹ ಮತ್ತು ಮುಖದ ಮೇಲೆ 800 ಬಾರಿ ಟ್ಯಾಟೂ ಹಾಕಿಸಿಕೊಂಡಿದ್ದಾಳೆ.
‘ನಾನು ಯಾರೆಂದು ಕಾಣಿಸದ ಕಾರಣದಿಂದ ನನಗೆ ಕ್ರಿಸ್ಮಸ್ ಪಾರ್ಟಿಗಳಿಗೆ ಆಹ್ವಾನ ಬರುವುದಿಲ್ಲ. ನಾನು ಪಬ್ನಲ್ಲಿ ಕುಡಿಯಲು ಮತ್ತು ಆನಂದಿಸಲು ಬಯಸುತ್ತೇನೆ, ಆದರೆ ಅವರು ನನ್ನನ್ನು ಒಳಗೆ ಬಿಡುತ್ತಿಲ್ಲ” ಎಂದು ಮಹಿಳೆ ಗೋಳು ತೋಡಿಕೊಂಡಿದ್ದಾಳೆ. ಈಕೆಯ ಟ್ವೀಟ್ಗೆ ನೆಟ್ಟಿಗರು ಹಲವರು ತಮಾಷೆಯ ಉತ್ತರ ನೀಡುತ್ತಿದ್ದಾರೆ.