alex Certify ಈ ಫೋಟೋದ ಹಿಂದಿದೆ ಮನಕಲಕುವ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಫೋಟೋದ ಹಿಂದಿದೆ ಮನಕಲಕುವ ಘಟನೆ

ಕಾಬೂಲ್: ದಣಿದ ತಾಯಿಗೆ ವಿಶ್ರಾಂತಿ ನೀಡಲು ಎರಡು ವಾರಗಳ ಮಗುವೊಂದನ್ನು ಬ್ರಿಟಿಷ್ ಸೈನಿಕನೊಬ್ಬ ಹಿಡಿದುಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಕಾಬೂಲ್ ನಿಂದ ಯುಕೆಗೆ ಅಫ್ಘನಿಗರನ್ನು ಸ್ಥಳಾಂತರಿಸುವ ವೇಳೆ ನಡೆದ ಘಟನೆ ಇದಾಗಿದೆ.

ಅಫ್ಘಾನಿಸ್ತಾನ ತಾಲಿಬಾನ್ ವಶವಾದ ಬಳಿಕ ಅಲ್ಲಿನ ಜನರ ವೇದನೆ ಹೇಳತೀರದಾಗಿದೆ. ನೂರಾರು ಅಫ್ಘನಿಗಳು ದೇಶ ತೊರೆದಿದ್ದರೆ, ಇನ್ನೂ ಹಲವು ಮಂದಿ ಅಸಹಾಯಕರಾಗಿ ಉಳಿದುಕೊಂಡಿದ್ದಾರೆ. ಅವರ ವೇದನೆ ಮತ್ತು ಅಸಹಾಯಕತೆಯನ್ನು ಎತ್ತಿ ತೋರಿಸುತ್ತಾ, ಯುಕೆಯ ರಾಯಲ್ ಏರ್ ಫೋರ್ಸ್ ಸಾರ್ಜೆಂಟ್ ಅವರು ಎರಡು ವಾರಗಳ ಮಗುವನ್ನು ಹೇಗೆ ಎತ್ತಿಕೊಂಡು ಬಂದೆ ಎಂಬುದರ ಬಗ್ಗೆ ಹಂಚಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಸಾರ್ಜೆಂಟ್ ಆಂಡಿ ಲಿವಿಂಗ್ಸ್ಟೋನ್ ವಿಮಾನದಲ್ಲಿ ಐದು ಜನರ ಕುಟುಂಬವನ್ನು ಗುರುತಿಸಿದ್ದಾರೆ. ಇದರಲ್ಲಿ ಪೋಷಕರು ಮತ್ತು ಅವರ ಮೂವರು ಮಕ್ಕಳು ಇದ್ದರು. ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ದಾಳಿಯ ನಂತರ ಇವರು ಸೇರಿಕೊಂಡಿದ್ದರು. ಸಾಕಷ್ಟು ದಣಿದಿದ್ದ ಮಹಿಳೆಯು ಮಗುವನ್ನು ಹಿಡಿದುಕೊಳ್ಳಲು ಸಾಧ್ಯವಾಗದೆ ಸಾರ್ಜೆಂಟ್ ಬಳಿ ಮಗುವನ್ನು ಹಿಡಿದುಕೊಳ್ಳುವಂತೆ ಮನವಿ ಮಾಡಿದ್ದಾಳೆ. ಸಾರ್ಜೆಂಟ್ ತೆಕ್ಕೆಯಲ್ಲಿ ಮಲಗಿದ ಮಗು ನಿದ್ದೆ ಹೋಗಿರುವ ದೃಶ್ಯ ಕಾಣಬಹುದು.

“ಇದು ಎರಡು ವಾರಗಳ ಮಗು. ಈ ತೂಕವಿಲ್ಲದ ಮಗುವನ್ನು ಬಡ ಮಹಿಳೆ ಹೊತ್ತುಕೊಳ್ಳಲೂ ಸಾಧ್ಯವಾಗದೆ ಎಷ್ಟು ದಣಿದಿರಬಹುದು? ” ಎಂದು ಸಂದರ್ಶನವೊಂದರಲ್ಲಿ ಸಾರ್ಜೆಂಟ್ ಹೇಳಿದ್ದಾರೆ. ಮಹಿಳೆ ವಿಶ್ರಾಂತಿ ಪಡೆದ 40 ನಿಮಿಷದ ನಂತರ ಮಗುವನ್ನು ತಾಯಿಯ ಕೈಗೆ ಕೊಟ್ಟಿದ್ದಾರೆ. ಆದರೆ, ಇದನ್ನು ತಾನೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸಾರ್ಜೆಂಟ್ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...