ಇಂಗ್ಲೆಂಡ್ ನಲ್ಲಿ 12 ವರ್ಷದ ಬಾಲಕನೊಬ್ಬ ಗೂಗಲ್ ಮ್ಯಾಪ್ ನಲ್ಲಿ ಪರಿಚಯವಿಲ್ಲದ ಹೆಗ್ಗುರುತೊಂದನ್ನು ಕಂಡು ಆಘಾತಕ್ಕೊಳಗಾಗಿರುವ ಘಟನೆ ನಡೆದಿದೆ.
ಗೂಗಲ್ ಮ್ಯಾಪ್ ನಲ್ಲಿ ಕರಾವಳಿಯಲ್ಲಿ ಬ್ರೌಸ್ ಮಾಡುತ್ತಿದ್ದಾಗ, ದ್ವೀಪದಲ್ಲಿ ‘ಭೂಮಿಯ ಮಧ್ಯದಲ್ಲಿ ರಂಧ್ರ’ ಎಂಬ ಶೀರ್ಷಿಕೆಯೊಂದಿಗೆ ಪ್ರವಾಸಿ ಐಕಾನ್ ಅನ್ನು ನೋಡಿದನು.
ರೋರಿ ಚಾಪ್ ಮನ್ ದ್ವೀಪದ ಉಪಗ್ರಹ ವೀಕ್ಷಣೆಗಾಗಿ ಗೂಗಲ್ ನಕ್ಷೆಯನ್ನು ಬ್ರೌಸ್ ಮಾಡುತ್ತಿದ್ದ. ತಮ್ಮ ಮುಂದಿನ ಕುಟುಂಬ ಪ್ರವಾಸಕ್ಕೆ ವಾಕಿಂಗ್ ಮಾರ್ಗವನ್ನು ಹುಡುಕುತ್ತಿದ್ದ. ಈ ವೇಳೆ ಇಂಗ್ಲೆಂಡ್ ನ ಮರ್ಸಿಸೈಡ್ ನ ಪಶ್ಚಿಮ ಕಿರ್ಬಿಯ ಹಿಲ್ ಬ್ರೆ ದ್ವೀಪವನ್ನು ನೋಡಿದ್ದಾನೆ.
ವರದಿಗಳ ಪ್ರಕಾರ, ಕರಾವಳಿಯಲ್ಲಿ ಬ್ರೌಸ್ ಮಾಡುತ್ತಿದ್ದಾಗ, ದ್ವೀಪದಲ್ಲಿ ಭೂಮಿಯ ಮಧ್ಯದಲ್ಲಿ ರಂಧ್ರ ಎಂಬ ಶೀರ್ಷಿಕೆ ಇರುವುದನ್ನು ಗಮನಿಸಿದ್ದಾನೆ.
ಅಫ್ಘಾನಿಸ್ತಾನದ ಅಮೆರಿಕ ರಾಯಭಾರ ಕಚೇರಿಯಲ್ಲಿ ಹಾರಿದ ತಾಲಿಬಾನ್ ಧ್ವಜ
ಆವಿಷ್ಕಾರದ ಬಗ್ಗೆ ಮಾತನಾಡುತ್ತಾ ರೋರಿ, ತಾನು ಲಾಕ್ ಡೌನ್ ಸಮಯದಲ್ಲಿ ಭೂಗೋಳವನ್ನು ಅಧ್ಯಯನ ಮಾಡುತ್ತಿದ್ದ. ಈ ವೇಳೆ ಹಿಲ್ ಬ್ರೆ ದ್ವೀಪವನ್ನು ಗಮನಿಸಿದ್ದಾನೆ. ಅವನಿಗೆ ಎಲ್ಲಾ ಸ್ಥಳಗಳ ಬಗ್ಗೆ ನಿಖರವಾಗಿ ತಿಳಿದಿತ್ತು.
ಬ್ರೌಸಿಂಗ್ ಮಾಡುವಾಗ ಇದನ್ನು ನಾನು ಹಿಂದೆಂದೂ ನೋಡಿರಲಿಲ್ಲ. ಮತ್ತು ನಾನು ಅದನ್ನು ನೋಡಿದಾಗ ಆಘಾತಕ್ಕೊಳಗಾಗಿದ್ದೆ. ದ್ವೀಪಗಳಲ್ಲಿ ದೊಡ್ಡ ರಂಧ್ರ ಅಗೆದಿದ್ದಾರೆಯೇ..? ಹಿಲ್ ಬ್ರೇ ದ್ವೀಪಗಳಲ್ಲಿ ಬಂದು ಅಗೆದಿದ್ದಾರೆಯೇ ಎಂದು ಪ್ರಶ್ನಿಸಿದ್ದಾನೆ.