ರೋಗಿಯೊಂದಿಗೆ ಆಸ್ಪತ್ರೆಯ ನರ್ಸ್ ಲೈಂಗಿಕ ಸಂಪರ್ಕ ನಡೆಸಿದ್ದು ಈ ವೇಳೆ ರೋಗಿ ಸಾವನ್ನಪ್ಪಿರೋ ಆಘಾತಕಾರಿ ಘಟನೆ ಬ್ರಿಟನ್ ನ ವೇಲ್ಸ್ ನಲ್ಲಿ ನಡೆದಿದೆ. ಈ ಘಟನೆಯ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ಗೊತ್ತಾದ ಬಳಿಕ ನರ್ಸ್ ನ ಕೆಲಸದಿಂದ ತೆಗೆದುಹಾಕಲಾಗಿದೆ.
ರೋಗಿಯೊಂದಿಗೆ ಕಳೆದ ಒಂದು ವರ್ಷದಿಂದ ಲೈಂಗಿಕ ಸಂಪರ್ಕದಲ್ಲಿದ್ದ ವಿಷಯವನ್ನ ನರ್ಸ್ ಸ್ವತಃ ಒಪ್ಪಿಕೊಂಡಿದ್ದಾರೆ. ಆಸ್ಪತ್ರೆಯ ಪಾರ್ಕಿಂಗ್ ಜಾಗದಲ್ಲಿ ಕಾರ್ ನ ಹಿಂಬದಿಯಲ್ಲಿ ರೋಗಿ ಅರೆನಗ್ನವಾಗಿ ಸತ್ತು ಬಿದ್ದಿದ್ದರು. ಈ ವೇಳೆ ನರ್ಸ್ ಆಂಬುಲೆನ್ಸ್ ಗೆ ಕರೆ ಮಾಡಿಲ್ಲ ಎಂದು ಆರೋಪಿಸಲಾಗಿದೆ. ನರ್ಸ್ ಅನ್ನು 42 ವರ್ಷದ ಪೆನೆಲೋಪ್ ವಿಲಿಯಮ್ಸ್ ಎಂದು ಗುರುತಿಸಲಾಗಿದೆ.
ರೋಗಿಯು ವೇಲ್ಸ್ ನ ಆಸ್ಪತ್ರೆಯಲ್ಲಿ ಕಳೆದೊಂದು ವರ್ಷದಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಘಟನೆಯ ಬಗ್ಗೆ ನರ್ಸಿಂಗ್ ಮತ್ತು ಮಿಡ್‌ವೈಫರಿ ಕೌನ್ಸಿಲ್ (ಎನ್‌ಎಂಸಿ) ಪ್ಯಾನೆಲ್ ವಿವರವಾದ ತನಿಖೆಗೆ ಸೂಚಿಸಿದೆ.
ನರ್ಸ್ ತನ್ನ ವೃತ್ತಿಯ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಲ್ಲದೆ, ಆಂಬ್ಯುಲೆನ್ಸ್ ಗೆ ಕರೆ ಮಾಡದಿದ್ದಕ್ಕಾಗಿ ವೈದ್ಯಕೀಯ ವೃತ್ತಿಪರಳಾಗಿ ವರ್ತಿಸುವುದರಲ್ಲಿ ವಿಫಲರಾಗಿದ್ದಾರೆ. ರೋಗಿ ಕಾರಿನಲ್ಲಿ ಕುಸಿದು ಬಿದ್ದ ನಂತರ ಅವರು ಆಂಬುಲೆನ್ಸ್ ಗೆ ಕರೆ ಮಾಡದೇ ತನ್ನ ಸಹೋದ್ಯೋಗಿಗೆ ಕರೆ ಮಾಡಿದ್ದರು. ಆಂಬ್ಯುಲೆನ್ಸ್ ಗೆ ಕರೆ ಮಾಡಲು ಸಹೋದ್ಯೋಗಿಗಳು ಸೂಚಿಸಿದ್ರೂ ಆಕೆ ಅದನ್ನು ನಿರ್ಲಕ್ಷಿಸಿದ್ದಳು ಎಂದು ಆರೋಪಿಸಲಾಗಿದೆ.