ಕೋವಿಡ್ ಸೋಂಕಿನ ಭೀತಿಯ ನಡುವೆಯೂ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ಇದ್ದಿದ್ದಲ್ಲದೇ ಪೊಲೀಸರಿಗೆ ಕಿರಕಿರಿ ಮಾಡಿದ ಆರೋಪದ ಮೇಲೆ ಬ್ರಿಟನ್ ಪ್ರಜೆಯೊಬ್ಬರಿಗೆ ಆರು ವಾರಗಳ ಜೈಲು ಶಿಕ್ಷೆ ವಿಧಿಸಿದ ಘಟನೆ ಸಿಂಗಪುರದಲ್ಲಿ ಜರುಗಿದೆ.
ಸೋಂಕಿನಿಂದ ಸುರಕ್ಷಿತವಾಗಿರಲು ಸಾರ್ವಜನಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಸಿಂಗಪುರದಲ್ಲಿ ಬೆಂಜ಼ಮಿನ್ ಗ್ಲಿನ್ ಹೆಸರಿನ ಈತ ಮಾಸ್ಕ್ ಧರಿಸದೇ ರೈಲಿನಲ್ಲಿ ಓಡಾಡಿದ ವಿಡಿಯೋ ವೈರಲ್ ಆದ ಮೇಲೆ ಬಂಧಿಸಲಾಗಿದೆ. ಅಲ್ಲದೇ ತನ್ನನ್ನು ಬಂಧಿಸಲು ಬಂದಿದ್ದ ಪೊಲೀಸ್ ಪೇದೆಗಳಿಗೆ ಕಿರಿಕಿರಿ ಕೊಟ್ಟ 40 ವರ್ಷದ ಈ ವ್ಯಕ್ತಿ ಕಳೆದ ತಿಂಗಳು ಕೋರ್ಟ್ ವಿಚಾರಣೆ ವೇಳೆಯೂ ಮುಖ ಮುಚ್ಚಿಕೊಳ್ಳಲು ನಿರಾಕರಿಸಿದ್ದಾನೆ.
ಕೇಂದ್ರ ಸಚಿವರ ಭೇಟಿ ಬಳಿಕ ಬಾಳಾ ಠಾಕ್ರೆ ಸ್ಮಾರಕ ಶುದ್ಧಿ ಮಾಡಿದ ಶಿವಸೇನೆ
ಇಷ್ಟೆಲ್ಲಾ ರಾದ್ಧಾಂತ ಮಾಡಿದ ಗ್ಲೆನ್‌ಗೆ ಮಾನಸಿಕ ಅಸ್ವಸ್ಥತೆ ಇದೆಯೇ ಎಂದು ಪರೀಕ್ಷಿಸಿ ನೋಡಿದಾಗ ನೆಗೆಟಿವ್ ವರದಿ ಬಂದಿದೆ.
ಈ ಕಾರಣದಿಂದ ನ್ಯಾಯಾಧೀಶರು ಗ್ಲೆನ್‌ಗೆ ಆರು ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ.