alex Certify ಬ್ರಿಟಿಷ್ ಬ್ಲಾಗರ್​ನಿಂದ ರವಾ ಇಡ್ಲಿ, ಸಾಂಬಾರ್​ ತಯಾರಿಕೆ: ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಿಟಿಷ್ ಬ್ಲಾಗರ್​ನಿಂದ ರವಾ ಇಡ್ಲಿ, ಸಾಂಬಾರ್​ ತಯಾರಿಕೆ: ಮನಸೋತ ನೆಟ್ಟಿಗರು

ಲಂಡನ್​: ಬ್ರಿಟಿಷ್​ ಆಹಾರ ಬ್ಲಾಗರ್ ಭಾರತೀಯ ಪ್ರಾದೇಶಿಕ ಖಾದ್ಯದ ಬಗ್ಗೆ ಹೆಚ್ಚು ಪ್ರೀತಿ ಹೊಂದಿದ್ದು, ಅವುಗಳ ಖಾದ್ಯ ತಯಾರಿಸಿ ಶೇರ್​ ಮಾಡುತ್ತಲಿರುತ್ತಾರೆ. ಜೇಕ್ ಡ್ರೈಯಾನ್ ಎಂಬ ಬ್ಲಾಗರ್​ ವಿವಿಧ ಭಕ್ಷ್ಯಗಳನ್ನು ತಯಾರಿಸುವ ಮೂಲಕ ಭಾರತೀಯ ಆಹಾರದ ಬಗ್ಗೆ ಹೆಚ್ಚು ಹೆಚ್ಚು ಕಲಿಯಲು ತಮ್ಮ ಪ್ರೊಫೈಲ್ ಅನ್ನು ಮೀಸಲಿಟ್ಟಿದ್ದಾರೆ.

ಪ್ರತಿ ವಾರ, ಅವರು ವಿಭಿನ್ನ ಪ್ರದೇಶದ ಪಾಕಪದ್ಧತಿಯ ಮೇಲೆ ಕೇಂದ್ರೀಕರಿಸುತ್ತಾರೆ. ಅವರು ಇದುವರೆಗೆ ಗುಜರಾತ್, ರಾಜಸ್ಥಾನ, ಕರ್ನಾಟಕ ಮತ್ತು ಪಂಜಾಬ್​ನ ವಿಶಿಷ್ಠ ಖಾದ್ಯಗಳನ್ನು ಪರಿಚಯಿಸಿದ್ದಾರೆ. ಇದೀಗ ಅವರು ಸಾಂಬಾರ್‌ನೊಂದಿಗೆ ರವಾ ಇಡ್ಲಿ ತಯಾರಿಸುತ್ತಿರುವ ವಿಡಿಯೋ ಭಾರಿ ವೈರಲ್​ ಆಗುತ್ತಿದೆ.

ವಿಡಿಯೋದಲ್ಲಿ ಅವರು, ರವಾ ಇಡ್ಲಿ ಮತ್ತು ಸಾಂಬಾರ್‌ನ ಸುಂದರವಾದ ಟ್ರೇ ಕುರಿತು ಪರಿಚಯಿಸಿದ್ದಾರೆ. ಪಾಕವಿಧಾನದೊಂದಿಗೆ ಅವರು ವಿಡಿಯೋ ಆರಂಭಿಸಿ, ರವಾ ಇಡ್ಲಿ ಹಿಟ್ಟನ್ನು ಹೇಗೆ ಮಾಡಬೇಕೆಂದು ಪ್ರಾತ್ಯಕ್ಷಿಕೆ ನೀಡಿದರು.

ರವೆ, ಮೊಸರು ಮತ್ತು ಮಸಾಲೆಗಳೊಂದಿಗೆ ಸಂಯೋಜಿಸಿದ ನಂತರ ಸಾಂಬಾರ್​, ರವಾ ಇಡ್ಲಿ ಮಾಡಿದ್ದಾರೆ. ಸಣ್ಣದಾಗಿ ಕೊಚ್ಚಿದ ತರಕಾರಿಗಳು, ಹುಣಸೆ ನೀರು ಹಾಕುವುದನ್ನು ತೋರಿಸಿದ್ದಾರೆ. ಈ ವಿಡಿಯೋ ಇದಾಗಲೆ 2.5 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...