ಕಳೆದ ವರ್ಷದಿಂದ ಬಾಧಿಸುತ್ತಿರುವ ಕೋವಿಡ್-19 ಸೋಂಕಿನಿಂದಾಗಿ ಜಗತ್ತಿನಾದ್ಯಂತ ಸಾವುಗಳ ಸಂಖ್ಯೆ ಹೆಚ್ಛಾಗುತ್ತಲೇ ಸಾಗಿದೆ. ಸೋಂಕಿನ ವಿರುದ್ಧ ಹೋರಾಡಲು ಆಸ್ಪತ್ರೆಗೆ ದಾಖಲಿಸಿದರೂ ಸಹ ಮೃತಪಟ್ಟ ಅನೇಕ ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಗಳು ಬರುತ್ತಲೇ ಇವೆ.
ಇದೇ ರೀತಿಯ ನಿದರ್ಶನವೊಂದರಲ್ಲಿ, ಕೋವಿಡ್ ಸೋಂಕಿತರೊಬ್ಬರು ಸತತ 243 ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದು ಮೃತಪಟ್ಟಿದ್ದಾರೆ. ನಿಕೋಲಾಸ್ ಸಿನ್ನೋಟ್ ಹೆಸರಿನ 60 ವರ್ಷ ವಯಸ್ಸಿನ ಈತ ಬ್ರಿಟಿಷ್ ಏರ್‌ವೇಸ್‌ನ ಪೈಲಟ್ ಆಗಿದ್ದು, ಇಬ್ಬರು ಮಕ್ಕಳ ತಂದೆಯಾಗಿದ್ದಾರೆ.
ಬಿಜೆಪಿಯಲ್ಲಿ ಅನಿರೀಕ್ಷಿತ ಬೆಳವಣಿಗೆ: ನಾಯಕತ್ವ ಮಾತ್ರವಲ್ಲ, ಉಸ್ತುವಾರಿ ಬದಲಾವಣೆಗೂ ಭಿನ್ನರ ಒತ್ತಡ…?
ವರ್ಷದ ಹಿಂದೆ ಲಂಡನ್-ಹೂಸ್ಟನ್ ನಡುವಿನ ಫ್ಲೈಟ್ ಒಂದನ್ನು ಚಲಾಯಿಸುತ್ತಿದ್ದ ವೇಳೆ ಕೋವಿಡ್ ಸೋಂಕಿತರಾದ ನಿಕೋಲಾಸ್, ದಾಖಲೆಯ 243 ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಅವರ ಸಾವಿನ ಹಿಂದಿನ ಕಾರಣವೇನೆಂದು ಅಧಿಕೃತವಾಗಿ ತಿಳಿದು ಬರದೇ ಇದ್ದರೂ ಸಹ ಕೋವಿಡ್-19 ಸಂಬಂಧಿ ಸಾವು ಇದಾಗಿದೆ ಎನ್ನಲಾಗುತ್ತಿದೆ.
ವೈರಸ್‌ನಿಂದಾಗಿ ನಿಕೋಲಾಸ್‌ರ ದೇಹದ ಅಂಗಾಂಗಗಳು ಗಂಭೀರವಾಗಿ ಹಾನಿಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.