ದೇಶವಾಸಿಗಳ ಪಾಲಿನ ದೊಡ್ಡ ಎಮೋಷನ್ಗಳಲ್ಲಿ ಒಂದಾದ ಬ್ರಿಟಾನಿಯಾ ಬಿಸ್ಕೆಟ್ ಕಂಪನಿ ಇದೀಗ ತನ್ನ ಕ್ಲಾಸಿಕ್ ಉತ್ಪನ್ನಗಳಲ್ಲಿ ಒಂದಾದ ಮಿಲ್ಕ್ ಬಿಕೀಸ್ ಅನ್ನು ತಮಿಳುನಾಡಿನಲ್ಲಿ ಮತ್ತೆ ಬಿಡುಗಡೆ ಮಾಡಿದೆ.
ಗ್ರಾಹಕರ ಭಾರೀ ಬೇಡಿಕೆ ನಡುವೆ, ’ಆ ಕಾಲದ ನೆನಪುಗಳನ್ನು ಮರಳಿ ತರಲು’ ಈ ಅಭಿಯಾನಕ್ಕೆ ಚಾಲನೆ ಕೊಟ್ಟು, ಹಳೆಯ ದಿನಗಳ ಸಂತಸದ ಕ್ಷಣಗಳನ್ನು ಮರುಕಳಿಸುವ ಮೂಲಕ ಜನರು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸುವಂತೆ ಮಾಡಲು ಬ್ರಿಟಾನಿಯಾ ಮುಂದಾಗಿದೆ.
ಮನೆಯೊಳಗೆ ಪ್ರವೇಶಿಸಿದ ಅನಿರೀಕ್ಷಿತ ಅತಿಥಿ ಕಂಡು ಬೆಚ್ಚಿಬಿದ್ದ ಜನ..!
“80 ಹಾಗೂ 90ರ ದಶಕದ ತಲೆಮಾರುಗಳ ಅಚ್ಚುಮೆಚ್ಚಿನ ’ದಿ ಮಿಲ್ಕ್ ಬಿಕೀಸ್ ಕ್ಲಾಸಿಕ್’ ಈಗ ತನ್ನ ಅಸಲಿ ಅವತಾರದಲ್ಲಿ ಮತ್ತೊಮ್ಮೆ ಬಿಡುಗಡೆಗೊಂಡಿದೆ.
ತಮಿಳುನಾಡಿನ ಗ್ರಾಹಕರು ಮಿಲ್ಕ್ ಬಿಕೀಸ್ ತಿಂದು ಬೆಳೆದವರಾಗಿದ್ದು, ರಾಜ್ಯದೊಂದಿಗೆ ದೊಡ್ಡ ಮಟ್ಟದಲ್ಲಿ ಭಾವನಾತ್ಮಕ ನಂಟು ಹೊಂದಿದೆ ಈ ಬ್ರಾಂಡ್. ಈ ಪರಿಸ್ಥಿತಿಯಲ್ಲಿ ನಮ್ಮ ಹಳೆಯ ದಿನಗಳನ್ನು ಇನ್ನಷ್ಟು ಸ್ಮರಿಸಿಕೊಂಡು, ಬಾಲ್ಯದದ ಸರಳತೆ ಹಾಗೂ ಸ್ನೇಹಿತರನ್ನೆಲ್ಲಾ ನೆನೆಯಬೇಕು ಎನಿಸಿದೆ.
ನಾವು ಹೀಗೆ ಬೆಳೆದೆವು ಎಂದು ನಮ್ಮ ಮಕ್ಕಳಿಗೆ ತೋರಲು ನಮ್ಮಲ್ಲಿ ಅಷ್ಟಾಗಿ ಗುರುತುಗಳಿಲ್ಲ. ಹಾಗಾಗಿ ಮಿಲ್ಕ್ ಬಿಕೀಸ್ ಕ್ಲಾಸಿಕ್ ಅನ್ನು ಮರಳಿ ತರಲು ನಾವು ನಿರ್ಧರಿಸಿದ್ದೇವೆ” ಎನ್ನುತ್ತಾರೆ ಬ್ರಿಟಾನಿಯಾದ ಉಪಾಧ್ಯಕ್ಷ (ಮಾರುಕಟ್ಟೆ) ವಿನಯ್ ಸುಬ್ರಹ್ಮಣಿಯಂ.