
ಕಾಯುವವರೇ ಕಾಮುಕರಾದ್ರೆ ರಕ್ಷಣೆ ಯಾರಿಗೆ ಸಿಗಲು ಸಾಧ್ಯ? ಬ್ರಿಟನ್ ನಲ್ಲಿ ಇಂಥಹ ಘಟನೆ ನಡೆದಿದೆ. ಕಸ್ಟಡಿ ಅಧಿಕಾರಿಯೊಬ್ಬಳು 15 ವರ್ಷದ ಹುಡುಗನಿಗೆ ಲೈಂಗಿಕ ಕಿರುಕುಳ ನೀಡಿದ್ದಾಳೆ. ಬಾಲಕನ ರಕ್ಷಣೆಗಾಗಿ ಆಕೆಯನ್ನು ನೇಮಕ ಮಾಡಲಾಗಿತ್ತು. ಆದ್ರೆ ಆತನ ರಕ್ಷಣೆ ಮಾಡುವ ಬದಲು ಆತನಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಆಕ್ಷೇಪಾರ್ಹ ಸಂದೇಶ ಕಳುಹಿಸಿದ್ದಾಳೆ.
ಸಾಕ್ಷ್ಯಾಧಾರದ ಆಧಾರದ ಮೇಲೆ ಪೊಲೀಸರು ಅಧಿಕಾರಿಯನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಅಧಿಕಾರಿಯನ್ನು ಜೈಲಿಗೆ ಕಳುಹಿಸಿದೆ. 26 ವರ್ಷದ ಮಹಿಳಾ ಅಧಿಕಾರಿ ಡಿಸೆಂಬರ್ 2018ರಿಂದ ಜೂನ್ 2019ರವರೆಗೆ ಕಿರುಕುಳ ನೀಡಿದ್ದಾಳೆ. ನಿನ್ನ ಜೊತೆ ಹಾಸಿಗೆ ಹಂಚಿಕೊಳ್ಳಲು ಉತ್ಸುಕಳಾಗಿದ್ದೇನೆ. ಕಾಯಲು ಸಾಧ್ಯವಾಗ್ತಿಲ್ಲವೆಂದು ಸಂದೇಶ ಕಳುಹಿಸಿದ್ದಳು.
ಈ ಫೋಟೋದಲ್ಲಿ ನೀನು ಸೆಕ್ಸಿಯಾಗಿ ಕಾಣ್ತಿಯಾ ಎಂಬ ಸಂದೇಶ ಕಳುಹಿಸಿದ್ದ ಅಧಿಕಾರಿ, ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳಂತೆ. ಆರೋಪಿ ಲ್ಯಾಪ್ ಟಾಪ್ ಹಾಗೂ ಮೊಬೈಲ್ ನಲ್ಲಿರುವ ಫೋಟೋ ಹಾಗೂ ಸಂದೇಶವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಆಶ್ಲೆಗೆ ಕೋರ್ಟ್ ಎರಡು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಇದಕ್ಕೂ ಮುನ್ನವೂ ಆಶ್ಲೆಗೆ ಶಿಕ್ಷೆಯಾಗಿತ್ತು ಎನ್ನಲಾಗಿದೆ.