ಅಕ್ಕ-ಪಕ್ಕದವರ ಜೊತೆ ಗಲಾಟೆ ಸಾಮಾನ್ಯ. ಆದ್ರೆ ಮಹಿಳೆಯೊಬ್ಬಳು ನೆರೆಯವರಿಗೆ ನೀಡಿದ ಕಿರುಕುಳದಿಂದ ಪ್ರಕರಣ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ. ಮಹಿಳೆಗೆ ಕೋರ್ಟ್ ಕೆಲ ನಿರ್ಬಂಧ ವಿಧಿಸಿದೆ.
ಅಮಂಡಾ ಲೀ ಹೆಸರಿನ ಮಹಿಳೆ, ನೆರೆಯವರ ಜಮೀನಿನಲ್ಲಿ ಮಲ ವಿಸರ್ಜನೆ ಮಾಡ್ತಿದ್ದಳು. ಇಷ್ಟೇ ಅಲ್ಲ ಕೆಟ್ಟ ಕೆಟ್ಟ ಶಬ್ಧಗಳಿಂದ ಕಿರಿಕಿರಿಯುಂಟು ಮಾಡ್ತಿದ್ದಳು. ಕಳೆದ 25 ವರ್ಷಗಳಿಂದ ಮಹಿಳೆ ಹೀಗೆ ಮಾಡ್ತಿದ್ದಾಳೆ. ಮಹಿಳೆ ಈ ಕೆಲಸಕ್ಕೆ ಅನೇಕರು ಅಸಮಾಧಾನಗೊಂಡಿದ್ದರು. ನ್ಯಾಯ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆ ಮಲ ವಿಸರ್ಜನೆ ಮಾಡುವುದನ್ನು ನಿಷೇಧಿಸಿದೆ. ಆರೋಪಿ ಮಹಿಳೆ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಅನುಮತಿ ನೀಡಿದೆ. 1996ರಿಂದ 2018ರವರೆಗೆ ಮಹಿಳೆ ಕಿರುಕುಳ ನೀಡಿದ್ದಾಳೆಂದು ನೆರೆಯವರು ದೂರಿದ್ದರು. ಸುಮಾರು 15 ಪ್ರಕರಣಗಳ ಮಹಿಳೆಗೆ ಶಿಕ್ಷೆ ವಿಧಿಸಲಾಗಿದೆ. ಎಚ್ಚರಿಕೆ ಮಧ್ಯೆಯೂ ಮಹಿಳೆ ತನ್ನ ಕೆಲಸ ಮುಂದುವರೆಸಿದ್ದಳು. ಈಗ ಕೋರ್ಟ್ ಕಠಿಣ ಸೂಚನೆ ನೀಡಿದೆ. ಒಂದು ವೇಳೆ ಮಹಿಳೆ ಷರತ್ತು ಉಲ್ಲಂಘಿಸಿದ್ರೆ 5 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಕೋರ್ಟ್ ಹೇಳಿದೆ.