ಬ್ರಿಟನ್ ನಲ್ಲಿ 11 ವರ್ಷದ ಹುಡುಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಕೇಳಲು ವಿಚಿತ್ರವೆನಿಸಿದ್ರೂ ಇದು ಸತ್ಯ. ಹುಡುಗಿ 10 ವರ್ಷದವಳಿದ್ದಾಗಲೇ ಗರ್ಭ ಧರಿಸಿದ್ದಳಂತೆ. ಆರಂಭದಲ್ಲಿ ಪಾಲಕರಿಗೆ ಈ ಸಂಗತಿ ತಿಳಿಯಲಿಲ್ಲವಂತೆ. ವಿಷ್ಯ ಗೊತ್ತಾಗ್ತಿದ್ದಂತೆ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದರಂತೆ.
ತಜ್ಞ ವೈದ್ಯರ ಆರೈಕೆಯಲ್ಲಿ ಹುಡುಗಿ ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ – ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ವೈದ್ಯರು ಹೇಳಿದ್ದಾರೆ. ಈಕೆ ಬ್ರಿಟನ್ ನ ಕಡಿಮೆ ವಯಸ್ಸಿನ ತಾಯಿ. ಇದಕ್ಕೂ ಮುನ್ನ ಟೆರೆಸಾ ಮಿಡಲ್ಟನ್ ಹೆಸರಿತ್ತು. 2006ರಲ್ಲಿ ಟೆರೆಸಾ ತನ್ನ 12ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಮಗುವಿನ ತಂದೆ ತನ್ನ ಸಹೋದರ. ನನ್ನ ಮೇಲೆ ಸಹೋದರ ಅತ್ಯಾಚಾರವೆಸಗಿದ್ದನೆಂದು ಟೆರೆಸಾ ಹೇಳಿದ್ದಳು.
ಅತಿ ಕಡಿಮೆ ವಯಸ್ಸಿನ ತಂದೆ-ತಾಯಿ ಪಟ್ಟಿಯಲ್ಲಿ 13 ವರ್ಷದ ಹುಡುಗ ಹಾಗೂ 12 ವರ್ಷದ ಹುಡುಗಿ ಹೆಸರಿದೆ. ಕಡಿಮೆ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುವ ತಾಯಂದಿರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ವಿಶ್ವದಲ್ಲಿ ಅತಿ ಕಡಿಮೆ ವಯಸ್ಸಿನ ತಾಯಂದಿರ ಪಟ್ಟಿಯಲ್ಲಿ ಪೆರುವಿನ ಹುಡುಗಿ ಹೆಸರಿದೆ. 1939ರಲ್ಲಿ 5 ವರ್ಷ 7 ತಿಂಗಳಿಗೆ ಆಕೆ ಮಗುವಿಗೆ ಜನ್ಮ ನೀಡಿದ್ದಳು. ಆಕೆಗೆ ಟ್ಯೂಮರ್ ಇದೆ ಎಂದುಕೊಂಡಿದ್ದ ಪಾಲಕರಿಗೆ ಶಾಕ್ ಆಗಿತ್ತು.