ಮಹಾಶಿವರಾತ್ರಿಯಂದು ಶಿವನ ಅನುಗ್ರಹ ಪಡೆಯಲು ಶಿವನಿಗೆ ಪ್ರಿಯವಾದ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಬನ್ನಿ. ಇದರಿಂದ ಶಿವ ಪ್ರಸನ್ನನಾಗಿ ನಿಮ್ಮ ಇಷ್ಟಾರ್ಥಗಳನ್ನು, ಕೋರಿಕೆಗಳನ್ನು ಈಡೇರಿಸುತ್ತಾನೆ. ಹಾಗಾಗಿ ಆ ವಸ್ತುಗಳು ಯಾವುದೆಂಬುದನ್ನು ತಿಳಿಯೋಣ.
ಶಿವರಾತ್ರಿಯಂದು ಸ್ಪಟಿಕದ ಶಿವಲಿಂಗ ತಂದು ಪೂಜಿಸಿದರೆ ನೀವು ಶಿವನ ಕೃಪೆಗೆ ಪಾತ್ರರಾಗುತ್ತೀರಿ. ಹಾಗೇ ಶಿವನಿಗೆ ಪ್ರಿಯವಾದ ರುದ್ರಾಕ್ಷಿಯನ್ನ ಮನೆಗೆ ತಂದು ದೇವರ ಕೋಣೆಯಲ್ಲಿಟ್ಟು ಪೂಜಿಸಿ ಧರಿಸಿ. ಹಾಗೇ ಶಿವನಿಗೆ ಪ್ರಿಯವಾದ ವಿಭೂತಿಯನ್ನು ತಂದು ಮನೆಯಲ್ಲಿಡಿ. ಇದರಿಂದ ಶಿವನ ಕೃಪೆ ನಿಮ್ಮ ಮೇಲಾಗುತ್ತದೆ.
ಹಾಗೇ ಶಿವನು ಯಾವಾಗಲೂ ಕೈಯಲ್ಲಿ ಧರಿಸುವ ಡಮರುಗವನ್ನು ಮನೆಗೆ ತಂದು ಪೂಜಿಸಿ ಬಾರಿಸಿದರೆ ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳು ಹೊರಗೆ ಹೋಗುತ್ತದೆ. ಇದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಹಾಗೇ ಶಿವನ ಕೈಯಲ್ಲಿರುವ ದೇವಿಯ ಸ್ವರೂಪವಾದ ತ್ರಿಶೂಲವನ್ನು ತಂದು ದೇವರ ಕೋಣೆಯಲ್ಲಿಟ್ಟು ಪೂಜಿಸಿ. ಇದರಿಂದ ದುಷ್ಟ ಶಕ್ತಿ, ಮಾಟಮಂತ್ರದ ಸಮಸ್ಯೆ ನಿವಾರಣೆಯಾಗುತ್ತದೆ.