ವಿಜಯಪುರ: ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಡಲಾಗಿದೆ.
ಭೀಮಾನದಿಗೆ 1,16,000 ಕ್ಯೂಸೆಕ್ ನೀರು ಬಿಡಲಾಗಿದ್ದು, ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಚಡಚಣ, ಇಂಡಿ, ಆಲಮೇಲ ತಾಲೂಕುಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ನದಿ ಪ್ರವಾಹದಿಂದಾಗಿ 7 ಬ್ಯಾರೇಜ್ ಕಂ ಬ್ರಿಡ್ಜ್ ಗಳು ಮುಳುಗಡೆಯಾಗಿವೆ.
ಗೋವಿಂದಪುರ -ಭಂಡಾರ ಕವಟೆ, ಉಮರಾಣಿ –ಲವಂಗಿ, ಔಜ –ಶಿರನಾಳ, ಹಿಂಗಾಣಿ –ಆಳಗಿ, ಖಾನಾಪುರ –ಪಡನೂರ, ಹಿಳ್ಳ –ಗುಬ್ಬೇವಾಡ, ಚಣೇಗಾಂವ –ಬರೂರು ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆಯಾಗಿವೆ. ಇದರಿಂದಾಗಿ ಅನೇಕ ಮಾರ್ಗಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.