![](https://kannadadunia.com/wp-content/uploads/2023/06/af0a3c384a1ea5ba41b753930b0fdf86768b6e9e38df0ae681115db21fce3fca-1024x576.jpg)
ಸೇತುವೆ ಕುಸಿತದ ಕುರಿತು ಮಾತನಾಡಿದ ಕಾರ್ಯಪಾಲಕ ಇಂಜಿನಿಯರ್ ನೀರವ್ ರಾಥೋಡ್, 2021 ರಲ್ಲಿ 2 ಕೋಟಿ ವೆಚ್ಚದಲ್ಲಿ ಸೇತುವೆಯ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿತ್ತು. ತಜ್ಞರಿಂದ ತನಿಖೆ ನಡೆದ ಬಳಿಕ ಸೇತುವೆ ಕುಸಿತಕ್ಕೆ ಕಾರಣ ತಿಳಿಯಲಿದೆ ಎಂದಿದ್ದಾರೆ. ನಿರ್ಮಾಣವಾದ 2 ವರ್ಷಕ್ಕೇ ಸೇತುವೆ ಕುಸಿದಿದ್ದು ಗುಣಮಟ್ಟದ ಬಗ್ಗೆ ಪ್ರಶ್ನಿಸುವಂತಾಗಿದೆ.
ಇತ್ತೀಚೆಗೆ ಜೂನ್ 4 ರಂದು ಬಿಹಾರದ ಭಾಗಲ್ಪುರದಲ್ಲಿ ಆಗುವನಿ-ಸುಲ್ತಂಗಂಜ್ ಸೇತುವೆ ಕುಸಿದಿತ್ತು. ಗಂಗಾ ನದಿಯ ಮೇಲೆ ಭಾಗಲ್ಪುರ ಮತ್ತು ಖಗರಿಯಾ ಜಿಲ್ಲೆಗಳನ್ನು ಸಂಪರ್ಕಿಸಲು ಸೇತುವೆಯನ್ನು ನಿರ್ಮಿಸಲಾಗಿದೆ. 1,770 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದಲ್ಲಿ ನಿರ್ಮಿಸ್ತಿದ್ದ ಸೇತುವೆ ಕುಸಿದು ಬಿದ್ದಿದ್ರಿಂದ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.