alex Certify ಈ ವಧು ಧರಿಸಿದ ಚಿನ್ನಾಭರಣಗಳ ತೂಕ ಗೊತ್ತಾದ್ರೆ ದಂಗಾಗೋದು ಗ್ಯಾರಂಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಧು ಧರಿಸಿದ ಚಿನ್ನಾಭರಣಗಳ ತೂಕ ಗೊತ್ತಾದ್ರೆ ದಂಗಾಗೋದು ಗ್ಯಾರಂಟಿ

ಚಿನ್ನ ಅಂದ್ರೆ ಯಾವ ಹೆಣ್ಮಕ್ಕಳಿಗೆ ತಾನೆ ಇಷ್ಟ ಇಲ್ಲ ಹೇಳಿ..? ಮದುವೆಗೆ ಹೋದರಂತೂ ಹೆಣ್ಮಕ್ಳ ಕಣ್ಣೆಲ್ಲಾ ಮದುಮಗಳ ಮೇಲೆಯೇ ಇರುತ್ತದೆ. ಕೆಲವರಂತೂ ಮೈ ತುಂಬಾ ಒಡವೆ ಹಾಕಿ ಸುದ್ದಿಯಾಗುತ್ತಾರೆ. ಹಾಗೆಯೇ ಚೀನಾದ ವಧುವೊಬ್ಬಳು ಕೂಡ ಮೈಭಾರದ ಚಿನ್ನಾಭರಣಗಳನ್ನು ಧರಿಸಿ ಸುದ್ದಿಯಾಗಿದ್ದಾಳೆ.

ಶ್ರೀಮಂತನಾಗ್ಬೇಕೆಂದ್ರೆ ದಶಮಿ ದಿನ ಮಾಡಿ ಮಹತ್ವದ ಕೆಲಸ

ಹೌದು, ಚೀನಾದ ಹುಬೈ ಪ್ರಾಂತ್ಯದ ವಧು ತನ್ನ ಮದುವೆಯ ದಿನದಂದು 60 ಕೆ.ಜಿ. ತೂಕದ ಚಿನ್ನದ ಆಭರಣಗಳನ್ನು ಧರಿಸಿ, ಆನ್‌ಲೈನ್‌ನಲ್ಲಿ ಸದ್ದು ಮಾಡಿದ್ದಾಳೆ. ಆದರೆ, ಈ ವಧು ತಾನು ಧರಿಸಿದ್ದ ಆಭರಣಗಳ ಭಾರೀ ತೂಕಕ್ಕೆ ಕಷ್ಟವನ್ನು ಎದುರಿಸುತ್ತಿದ್ದಳು.

ಬಿಳಿ ಬಣ್ಣದ ಮದುವೆಯ ಉಡುಪು ತೊಟ್ಟು ಕಂಗೊಳಿಸುತ್ತಿದ್ದ ಆಕೆಯ ಕೈಯಲ್ಲಿ ಗುಲಾಬಿ ಹೂಗಳ ಪುಷ್ಪಗುಚ್ಛವಿತ್ತು. ಭಾರಿ ತೂಕದ ಚಿನ್ನಾಭರಣಗಳನ್ನು ಧರಿಸಿದ್ದ ಆಕೆ ತಿರುಗಾಡಲು ಕಷ್ಟ ಪಡುತ್ತಿದ್ದಳು. ನಡೆಯಲು ವರನ ಸಹಾಯವನ್ನು ಪಡೆಯಬೇಕಾಗಿತ್ತು.

ಪತ್ನಿ ಇಷ್ಟದಂತೆ ಮನೆ ನಿರ್ಮಿಸಿದ 72 ವರ್ಷದ ಪತಿ

ವರದಿ ಪ್ರಕಾರ, ವಧುವಿಗೆ ಆಕೆಯ ಗಂಡನಿಂದ ವಧುದಕ್ಷಿಣೆ ರೂಪದಲ್ಲಿ ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಹೇಳಲಾಗಿದೆ. ಆಕೆಗೆ 60 ಚಿನ್ನದ ನೆಕ್ಲೇಸ್‌ಗಳನ್ನು ನೀಡಲಾಗಿದೆ. ಪ್ರತಿಯೊಂದೂ ಒಂದು ಕಿಲೋಗ್ರಾಂ ತೂಕವಿತ್ತು. ನೆಕ್ಲೇಸ್‌ಗಳ ಜೊತೆಯಲ್ಲಿ, ವಧು ತನ್ನ ಎರಡು ಕೈಗಳಲ್ಲಿ ಎರಡು ದೊಡ್ಡ ಚಿನ್ನದ ಬಳೆಗಳನ್ನು ಧರಿಸಿದ್ದಳು. ಅವು ವರನ ಕುಟುಂಬದಿಂದ ಬಂದ ಉಡುಗೊರೆಗಳಾಗಿದ್ದವು. ವಧು ಬೃಹತ್ ಸಂಖ್ಯೆಯ ಚಿನ್ನದ ನೆಕ್ಲೇಸ್ ಮತ್ತು ಬಳೆಗಳನ್ನು ಧರಿಸಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸದ್ಯ ಭಾರಿ ವೈರಲ್ ಆಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...