ತನ್ನ ಮದುವೆಗೆ ಬರೀ $20,000 (14.65 ಲಕ್ಷ ರೂಪಾಯಿ) ಖರ್ಚು ಮಾಡಲು ಮಾತ್ರ ಸಾಧ್ಯ ಎಂದು ಹೆತ್ತವರು ಹೇಳಿದ ಕಾರಣ ಸಂಭವನೀಯ ಮದುಮಗಳು ತನ್ನ ಪ್ರಿಯಕರನೊಂದಿಗೆ ಓಡಿಹೋಗುವುದಾಗಿ ಬೆದರಿಕೆಯೊಡ್ಡಿದ್ದಾಳೆ.
ತನ್ನ ಮದುವೆಯ ಖರ್ಚನ್ನು ತನ್ನ ಹೆತ್ತವರು ಧಾರಾಳವಾಗಿ ಭರಿಸಲಿದ್ದಾರೆ ಎಂದಿದ್ದಾಳೆ ಈಕೆ. ಈ ಮದುವೆಗೆಂದು ಆಕೆಯ ತಂದೆ $40,000ಗಳ ಬಜೆಟ್ ಅನ್ನು ಸಹ ನಿಗದಿ ಮಾಡಿಕೊಂಡಿದ್ದಾರೆ. ಆದರೆ, ಈ ಬಜೆಟ್ ಅನ್ನು ಅರ್ಧಕ್ಕೆ ಇಳಿಸುವುದಾಗಿ ಹುಡುಗಿಯ ತಾಯಿ ಹೇಳಿದ ಮೇಲೆ ಕಥೆಗೊಂದು ಟ್ವಿಸ್ಟ್ ಸಿಕ್ಕಿದೆ.
ಸಾರಿಗೆ ನೌಕರರ ಕೂಟದಲ್ಲಿ ಒಡಕು, ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ತಿರುಗಿಬಿದ್ದ ಪದಾಧಿಕಾರಿಗಳು
“ನಾನು ಇತ್ತೀಚೆಗಷ್ಟೇ ಎಂಗೇಜ್ ಆಗಿದ್ದು ಮದುವೆಗೆ ತಯಾರಿ ಆರಂಭಿಸಿದ್ದೇನೆ. ನಾನು ನನ್ನ ಹೆತ್ತವರಿಗೆ ಒಬ್ಬಳೇ ಮಗಳಾಗಿದ್ದು, ಅವರು ಚೆನ್ನಾಗಿ ಸಂಪಾದಿಸುತ್ತಿರುವ ಕಾರಣ (ವರ್ಷಕ್ಕೆ ಸುಮಾರು 450 ಸಾವಿರ ಡಾಲರ್), ನಾನು ಮದುವೆಯಾಗಲು ನಿರ್ಧರಿಸುತ್ತಲೇ ಮದುವೆಗೆ ಚೆನ್ನಾಗಿ ಖರ್ಚು ಮಾಡುವುದಾಗಿ ಹೇಳಿದ್ದಾರೆ” ಎಂದು ಅಮೆರಿಕ ಮೂಲದ ಈ ಮದುಮಗಳು ರೆಡ್ಡಿಟ್‌ನಲ್ಲಿ ಬರೆದಿದ್ದಾಳೆ.
ಯಾವುದೇ ಗೊಂದಲವಿಲ್ಲ; ಎಲ್ಲರೂ ಒಗ್ಗಟ್ಟಾಗಿದ್ದೇವೆ; ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಸಿಎಂ
ಆದರೆ ಮದುವೆಯ ಬಜೆಟ್ ಗಾತ್ರದಲ್ಲಿ ಇಳಿಕೆಯಾಗುವ ಮಾತುಗಳು ಕೇಳಿ ಬರುತ್ತಲೇ, “ನನ್ನ ಮದುವೆಗೆ ತೀರಾ ಕಡಿಮೆ ಖರ್ಚು ಮಾಡುವುದಕ್ಕಿಂತ ಓಡಿಹೋಗಲು ಇಚ್ಛಿಸುವೆ” ಎಂದು ಹೆತ್ತವರ ಮುಂದೆ ಹೊಸ ಬಾಂಬ್ ಹಾಕಿದ್ದಾಳೆ.