ಮದುವೆ ಸಮಾರಂಭಗಳ ಭರದಲ್ಲಿರುವ ಮಂದಿ ಗೊಂದಲದಲ್ಲಿ ಮದುವೆ ಮನೆಗಳಲ್ಲಿ ಏಳುವುದು ಬೀಳುವುದು ಸಹಜ. ಆದರೆ ಸಾಮಾನ್ಯವಾಗಿ ಇಂಥ ಸಣ್ಣಪುಟ್ಟ ವಿಷಯಗಳನ್ನು ಮದುಮಕ್ಕಳ ಮನೆಯವರು ದೊಡ್ಡದು ಮಾಡಲು ಹೋಗುವುದಿಲ್ಲ.
ಆದರೆ, ಇಂಗ್ಲೆಂಡ್ನ ಮದುವೆ ಮನೆಯೊಂದರಲ್ಲಿ ಡ್ಯಾನ್ಸ್ ಫ್ಲೋರ್ ಮೇಲೆ ನೃತ್ಯ ಮಾಡುವ ವೇಳೆ ಜಾರಿ ಬಿದ್ದು ಮೊಣಕೈ ಮುರಿದುಕೊಂಡ ಮದುಮಗಳೊಬ್ಬಳು ಮದುವೆ ಮನೆ ಆಡಳಿತದ ವಿರುದ್ಧ 1,50,000 ಪೌಂಡ್ (1.5 ಕೋಟಿ ರೂ.) ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾಳೆ.
‘ಕಪಿ ಚೇಷ್ಠೆ’ ತಂದ ಸಾವು: ಕೋತಿ ಎಸೆದ ಇಟ್ಟಿಗೆಯಿಂದ ಹೋಯ್ತು ಅಮಾಯಕನ ಪ್ರಾಣ…..!
ಲ್ಯಾಮಿನೇಟ್ ಮಾಡಲಾದ ಪ್ಲಾಸ್ಟಿಕ್ ಫ್ಲೋರ್ ಮೇಲೆ ಹೋಗುವಾಗ ಅತಿಥಿಗಳು ಡ್ರಿಂಕ್ಸ್ ತೆಗೆದುಕೊಂಡು ಹೋಗದಂತೆ ನೋಡಿಕೊಳ್ಳಲು ಮದುವೆ ಮನೆ ಸಿಬ್ಬಂದಿ ವಿಫಲರಾದ ಕಾರಣ ನೆಲದ ಮೇಲೆ ಚೆಲ್ಲಿದ್ದ ಪಾನೀಯದ ಮೇಲೆ ಕಾಲಿಟ್ಟು ತಾನು ಬಿದ್ದಿದ್ದಾಗಿ ಮದುಮಗಳು ಕಾರಾ ಡೋನೋವನ್ ಹೇಳಿಕೊಂಡಿದ್ದು, ನೆಲದ ತುದಿಯಲ್ಲಿ ಮೇಜುಗಳನ್ನು ಇಡಲಾದ ಕಾರಣ ಮದುವೆ ವೇಳೆ ಕುಡಿದು ಕುಣಿಯಲು ಜನರಿಗೆ ಇನ್ನಷ್ಟು ಪ್ರೇರಣೆ ಕೊಟ್ಟಂತಾಗಿದೆ ಎಂದು ಮದುಮಗಳು ಆಪಾದನೆ ಮಾಡಿದ್ದಾಳೆ.
PUC ಪಾಸಾದವರಿಗೆ 20 ಸಾವಿರ, ಪದವೀಧರರಿಗೆ 25, ಪಿಜಿ ಆದವರಿಗೆ 30 ಸಾವಿರ ರೂ. ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
ಈ ಘಟನೆಯು 2018ರಲ್ಲಿ ಜರುಗಿದ್ದು, ಇದೀಗ ಎರಡು ಮಕ್ಕಳ ತಾಯಿಯಾಗಿರುವ ಡೋನೋವನ್, ಮೂರು ಶಸ್ತ್ರಚಿಕಿತ್ಸೆಗಳಾದರೂ ಸಹ ತನಗೆ ಆ ನೋವು ಇನ್ನೂ ಮಾಸಿಲ್ಲ ಎಂದು ಹೇಳಿಕೊಂಡಿದ್ದು, ಇದರಿಂದಾಗಿ ವಿಶೇಷ ಅಗತ್ಯಗಳ ಶಿಕ್ಷಕಿಯಾಗಿರುವ ತಾನು ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎಂದಿದ್ದಾರೆ.
ಆಕೆಯ ಗಟ್ಟಿ ತೀರ್ಮಾನ ಈಗ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಆಕಸ್ಮಿಕ ಘಟನೆಗೆ ಆಯೋಜಕರು ಬೆಲೆ ತೆರುವಂತಾಗಿದೆ.