alex Certify ಭಾವಿ ಪತ್ನಿಯೊಂದಿಗೆ ಮಾಜಿ ಪ್ರೇಯಸಿಯನ್ನೂ ಕೈಹಿಡಿದ ಮದುಮಗ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವಿ ಪತ್ನಿಯೊಂದಿಗೆ ಮಾಜಿ ಪ್ರೇಯಸಿಯನ್ನೂ ಕೈಹಿಡಿದ ಮದುಮಗ…!

ತನ್ನ ಭಾವೀ ಪತಿಯ ಮಾಜಿ ಗರ್ಲ್‌ಫ್ರೆಂಡ್‌ ಮದುವೆಗೆ ಆಗಮಿಸಿ ತನ್ನನ್ನೂ ಮದುವೆಯಾಗಲು ಆತನನ್ನು ಕೇಳಿದ್ದನ್ನು ಕಂಡ ಮದುಮಗಳೊಬ್ಬಳಿಗೆ ಶಾಕ್ ಆಗಿದೆ.

ಇಂಡೋನೇಷ್ಯಾದ ನೂರ್‌ ಖುಶ್ನುಲ್‌ ಕೋಟಿಮಾ ಎಂಬ 20 ವರ್ಷದ ಈ ಮಹಿಳೆಯ ಭಾವಿ ಪತಿ ಕೋರಿಕ್ ಅಕ್ಬರ್‌, ತನ್ನ ಮಾಜಿ ಪ್ರೇಯಸಿ ಯುನಿತಾ ರೂರಿಗೂ, ಬಾಳು ಕೊಡುವುದಾಗಿ ಹೇಳಿದಾಗ ಅದಕ್ಕೆ ಸಮ್ಮತಿಸದೇ ಬೇರೆ ದಾರಿಯೇ ಇಲ್ಲದಂತಾಗಿದೆ.

ಲಾಕ್​ಡೌನ್​ನಿಂದ ಮಹಿಳೆಯರ ಮೇಲೆ ಉಂಟಾಯ್ತು ಋಣಾತ್ಮಕ ಪರಿಣಾಮ: ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್​ ಮಾಹಿತಿ…..!

“ಕೋರಿಕ್‌ನ ಮದುವೆಗೆ ಆತನ ಸ್ನೇಹಿತರು ಸಾಮಜಿಕ ಜಾಲತಾಣದಲ್ಲಿ ಶುಭಾಶಯ ಕೋರುತ್ತಿದ್ದ ಪೋಸ್ಟ್‌ಗಳನ್ನು ಕಂಡ ಯುನಿತಾ, ನಮ್ಮ ಮದುವೆಯ ಪ್ಲಾನ್‌ಗಳನ್ನು ಅರಿತುಕೊಂಡು, ತನನ್ನೂ ಮಡದಿಯಾಗಿ ಸ್ವೀಕರಿಸಲು ನನ್ನ ಪತಿಯನ್ನು ಕೋರಿಕೊಂಡಿದ್ದಾಳೆ,” ಎಂದು ನೂರ್‌ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಪರಿಸ್ಥಿತಿಯ ಕುರಿತು ತನ್ನ ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿದ ಬಳಿಕ ಇಬ್ಬರನ್ನೂ ಮದುವೆಯಾಗಲು ಮದುಮಗ ಕೋರಿಕ್ ಮುಂದಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...