
ಮದುವೆಯಾದ ಐದನೇ ದಿನ ವಧು ಆಘಾತಕಾರಿ ಕೆಲಸಕ್ಕೆ ಕೈ ಹಾಕಿರುವ ಘಟನೆ ಬಿಹಾರದ ಶೇಖ್‌ಪುರದಲ್ಲಿ ನಡೆದಿದೆ. ಮದುವೆಯಾದ ಐದನೇ ದಿನ ನವವಿವಾಹಿತೆ ಮನೆ ಖಾಲಿ ಮಾಡಿದ್ದಾಳೆ.
ಅಚ್ಚರಿಯ ಸಂಗತಿ ಏನೆಂದ್ರೆ ವಧು ಓಡಿ ಹೋಗಿದ್ದು ಬೇರೆ ಯಾರ ಜೊತೆಯೂ ಅಲ್ಲ, ಸಹೋದರ ಸಂಬಂಧಿ ಜೊತೆ ಎಂಬುದು ಗೊತ್ತಾಗಿದೆ. ಅತ್ತೆಯ ಮನೆಯಿಂದಲೇ ಪರಾರಿಯಾಗಿರುವ ವಧು, ಚಿನ್ನಾಭರಣವನ್ನೂ ದೋಚಿದ್ದಾಳೆ.
ಮಾಧ್ಯಮಗಳ ವರದಿ ಪ್ರಕಾರ, ಮದುವೆ ಫೆಬ್ರವರಿ 5ರಂದು ನಡೆದಿತ್ತು. ಮದುವೆ ವಧು-ವರರ ಒಪ್ಪಿಗೆ ಮೇರೆಗೆ ನಡೆದಿತ್ತು. ಮದುವೆ ನಂತ್ರ ಪತಿ ಮನೆಗೆ ಬಂದ ವಧು, ಆರಾಮಾಗಿದ್ದಳು. ನಾಲ್ಕು ದಿನ ಅತ್ತೆ ಮನೆಯಲ್ಲಿದ್ದಳು. ಆದ್ರೆ ಐದನೇ ದಿನ ಆಕೆ ಕಾಣಿಸಲಿಲ್ಲ. ಮನೆಯನ್ನೆಲ್ಲ ಹುಡುಕಿದ ವರನ ಕಡೆಯವರು ವಧು ತಂದೆಗೆ ವಿಷ್ಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ತಂದೆ ಕೂಡ ಮಗಳಿಗಾಗಿ ಹುಡುಕಾಟ ನಡೆಸಿದ್ದಾನೆ. ನಂತ್ರ ವಧು ಬಂಗಾರದ ಜೊತೆ ಸಹೋದರ ಸಂಬಂಧಿಯೊಂದಿಗೆ ಓಡಿ ಹೋಗಿದ್ದಾಳೆಂಬುದು ಬಹಿರಂಗವಾಗಿದೆ.
ವಧು ತಂದೆ, ಮಗಳನ್ನು ಅಪಹರಿಸಲಾಗಿದೆ ಎಂದು ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಘಟನೆ ನಂತ್ರ ಗ್ರಾಮದಲ್ಲಿ ಈ ವಿಷ್ಯ ಬಿಸಿಬಿಸಿ ಚರ್ಚೆಯಾಗ್ತಿದೆ.