![](https://kannadadunia.com/wp-content/uploads/2022/05/marriage-change.png)
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಇಬ್ಬರು ಸಹೋದರಿಯರ ವಿವಾಹ ನಡೆಯುತ್ತಿದ್ದ ವೇಳೆ ವಿದ್ಯುತ್ ವ್ಯತ್ಯಯದಿಂದ ಗೊಂದಲ ಉಂಟಾಗಿದೆ. ಕತ್ತಲೆಯಲ್ಲಿ ವಧುಗಳು ಅದಲು ಬದಲಾಗಿ ವರನೊಂದಿಗೆ ಮದುವೆ ಶಾಸ್ತ್ರ ಮುಗಿಸಿದ್ದಾರೆಎ.
ರಮೇಶ್ ಲಾಲ್ ಅವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾ ಅವರ ಮದುವೆ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರೊಂದಿಗೆ ಭಾನುವಾರ ನೆರವೇರಿದೆ. ಮದುಮಗಳು ಮುಸುಕು ಹಾಕಿಕೊಂಡಿದ್ದರಿಂದ ಮತ್ತು ಇಬ್ಬರ ಉಡುಗೆ ಒಂದೇ ಆಗಿದ್ದರಿಂದ ಮದುವೆಯ ವಿಧಿವಿಧಾನದ ವೇಳೆಯಲ್ಲಿ ಕಲಬೆರಕೆ ನಡೆದಿರುವುದು ಯಾರಿಗೂ ಗೊತ್ತಾಗಿರಲಿಲ್ಲ.
ವಧು ವರರಿಂದ ಮದುವೆ ಶಾಸ್ತ್ರ ಮಾಡಿಸಿದ ಪಂಡಿತರು, ಬದಲಾದ ವಧುಗಳೊಂದಿಗೆ ಸುತ್ತು ಹಾಕಲು ಹೇಳಿಕೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ವರರು ತಮ್ಮ ವಧುಗಳನ್ನು ಮನೆಗೆ ಕರೆದೊಯ್ದಾಗ ಅದಲು ಬದಲಾಗಿರುವುದು ಗೊತ್ತಾಗಿದೆ. ಸ್ವಲ್ಪ ಸಮಯ ಜಗಳವಾಗಿದೆ. ವಾದ, ವಿವಾದದ ನಂತರ ಸಮಸ್ಯೆ ಇತ್ಯರ್ಥಕ್ಕೆ ಬಂದಿದೆ. ಮರುದಿನ ಮತ್ತೊಮ್ಮೆ ಮದುವೆ ಶಾಸ್ತ್ರಗಳನ್ನು ನೆರವೇರಿಸಲಾಗಿದೆ.