ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿದು ಬಿದ್ದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಮದುವೆಯಲ್ಲಿ ವಧುವಿಗೆ ಹಾಕುವ ಸಂದರ್ಭದಲ್ಲಿ ವರ ಕೈ ತಾಗಿಸಿದನೆಂಬ ಕಾರಣಕ್ಕೆ ಜಗಳವಾಗಿ ಮದುವೆಯನ್ನು ರದ್ದು ಮಾಡಲಾಗಿದೆ.
ಮದುವೆ ಮುಹೂರ್ತದ ವೇಳೆ ಮದುಮಗ ಹಾರ ಹಾಕುವಾಗ ವಧುವಿಗೆ ಕೈ ತಾಗಿದೆ ಎಂದು ಮದುಮಗಳು ತಗಾದೆ ತೆಗೆದಿದ್ದು, ನಂತರ ಎರಡು ಕುಟುಂಬದವರ ನಡುವೆ ವಾಗ್ವಾದ ನಡೆದಿದೆ. ಮುಹೂರ್ತದ ವೇಳೆಗೆ ಪರಿಸ್ಥಿತಿ ತಿಳಿಯಾಗಿ ವರ ತಾಳಿಕಟ್ಟಲು ಮುಂದಾಗುತ್ತಿದ್ದಂತೆ ಹೂವಿನ ಹಾರ ಎಸೆದು ಮದುವೆ ಬೇಡವೆಂದು ವಧು ಹೇಳಿದ್ದಾಳೆ.
ಇದರಿಂದಾಗಿ ಮದುವೆ ಸಮಾರಂಭದಲ್ಲಿ ವಧು-ವರರ ಕುಟುಂಬದವರ ನಡುವೆ ಜಗಳವಾಗಿದೆ. ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಲಾಗಿದ್ದು, ಬೇರೆ ಹೆಣ್ಣು ನೋಡಲು ಬಂದ ಹುಡುಗನೇ ಬೇರೆ, ನಿಶ್ಚಿತಾರ್ಥವಾಗಿದ್ದ ಹುಡುಗನೇ ಬೇರೆ, ಈಗ ಮದುವೆಯಾಗುತ್ತಿರುವ ಹುಡುಗನೂ ಬೇರೆಯಾಗಿದ್ದಾನೆ ಎಂದು ವಧು ಆರೋಪಿಸಿದ್ದಾರೆ. ಈ ಕಾರಣಕ್ಕೆ ಮದುವೆ ನಿಂತಿದೆ ಎನ್ನಲಾಗಿದೆ.