ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಗಳಿಗೆ ಒಳ್ಳೆ ವರನನ್ನು ಹುಡುಕಿ, ಅದ್ಧೂರಿಯಾಗಿ ಮದುವೆ ಮಾಡಬೇಕೆಂಬ ಆಸೆಯಿರುತ್ತದೆ. ಆದ್ರೆ ಆ ದೇಶದಲ್ಲಿ ಮಾತ್ರ ಹೆಣ್ಣು ಮಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡ್ತಾರೆ. ಈ ವೇಳೆ ತಂದೆ-ತಾಯಿ ಅಲ್ಲಿಯೇ ಇರ್ತಾರೆ.
ಅಚ್ಚರಿಯಾದ್ರೂ ಇದು ಸತ್ಯ. ಹೆಣ್ಣು ಮಕ್ಕಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪದ್ಧತಿ ಬಲ್ಗೇರಿಯಾದ ಸ್ಟಾರಾ ಜಾಗೋರಾದಲ್ಲಿ ಜಾರಿಯಲ್ಲಿದೆ. ವರ್ಷದಲ್ಲಿ ನಾಲ್ಕು ಬಾರಿ ಹೆಣ್ಣು ಮಕ್ಕಳ ಮಾರಾಟ ನಡೆಯುತ್ತದೆ. ಹೆಣ್ಣು ಮಕ್ಕಳನ್ನು ಹರಾಜಿಗೆ ಇಡಲಾಗುತ್ತದೆ. ಹೆಚ್ಚು ಹರಾಜು ಕೂಗಿದ ವ್ಯಕ್ತಿಗೆ ಮಗಳನ್ನು ಮದುವೆ ಮಾಡಲಾಗುತ್ತದೆ. ಈ ಹರಾಜಿನಲ್ಲಿ ಪಾಲ್ಗೊಳ್ಳುವ ಹುಡುಗಿಯರ ವಯಸ್ಸು 13-20 ವರ್ಷದೊಳಗಿರುತ್ತದೆ.
ಕಲೈಡ್ಜ್ ಸಮುದಾಯದಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಆದ್ರೆ ಹೆಣ್ಣು ಮಕ್ಕಳ ಖರೀದಿಗೆ ಬೇರೆ ಭಾಗದ ಯಾವುದೇ ವ್ಯಕ್ತಿಗಳು ಬರುವಂತಿಲ್ಲ. ಈ ಸಮುದಾಯದಲ್ಲಿ ಸುಮಾರು 18000 ಜನರಿದ್ದಾರೆ. ಈ ಸಮುದಾಯದ ಹುಡುಗಿಯರು ಈ ಪದ್ಧತಿಯನ್ನೂ ವಿರೋಧಿಸುವುದಿಲ್ಲ. ಹುಡುಗಿಯನ್ನು ಸುಮಾರು 300-400 ಡಾಲರ್ ನಲ್ಲಿ ಖರೀದಿ ಮಾಡಲಾಗುತ್ತದೆ. ಈ ಮಾರುಕಟ್ಟೆಗೆ ಬರಲು ಹುಡುಗಿಯರು ಅನೇಕ ದಿನಗಳಿಂದ ತಯಾರಿ ನಡೆಸುತ್ತಾರೆ. ಹೆಚ್ಚಿನ ಹಣ ಸಿಗಬೇಕೆಂದ್ರೆ ಹೆಚ್ಚು ಸುಂದರವಾಗಿರಬೇಕು. ಹಾಗಾಗಿ ಹುಡುಗಿಯರು ಸೌಂದರ್ಯ ವೃದ್ಧಿಗೆ ಹೆಚ್ಚು ಮಹತ್ವ ನೀಡ್ತಾರೆ.