ತಂದೆ-ಮಗಳ ಸಂಬಂಧವು ಅತ್ಯಂತ ಸುಂದರವಾದ ಮತ್ತು ವಿಶೇಷವಾದ ಬಾಂಧವ್ಯವಾಗಿದೆ. ತನ್ನ ಮದುವೆಯ ವಿಚಾರಕ್ಕೆ ಬಂದಾಗ, ಪ್ರತಿ ಹುಡುಗಿಯೂ ತನ್ನ ತಂದೆಯ ಉಪಸ್ಥಿತಿ ಬಯಸುತ್ತಾಳೆ. ಮಗಳು ತನ್ನ ತಂದೆಯ ಆಶೀರ್ವಾದವನ್ನು ಪಡೆಯದೆ ತನ್ನ ಮನೆಯಿಂದ ಹೊರಟು ಹೊಸ ಜೀವನವನ್ನು ಪ್ರಾರಂಭಿಸುವುದು ಅತ್ಯಂತ ನೋವಿನ ವಿಚಾರವಾಗಿದೆ. ಇದೀಗ ವೈರಲ್ ಆಗಿರೋ ವಿಡಿಯೋ ನಿಮ್ಮ ಕಣ್ಣಲ್ಲೂ ನೀರು ತರಿಸದೆ ಇರಲಾರದು.
ಹೌದು, ಮದುವೆಯ ದಿನ ತನ್ನ ದಿವಂಗತ ತಂದೆಯ ಮೇಣದ ಪ್ರತಿಮೆಯನ್ನು ನೋಡಿ ವಧು ಸಂತೋಷ ಮತ್ತು ದುಃಖವನ್ನು ಅನುಭವಿಸಿದ್ದಾಳೆ. ಮೇಣದ ಪ್ರತಿಮೆಯನ್ನು ನೋಡಿದ ನಂತರ ವಧು ಮತ್ತು ಆಕೆಯ ತಾಯಿ ಕಣ್ಣೀರು ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮದುವೆಗೆ ಬಂದಂತಹ ಅತಿಥಿಗಳಿಗೆ ಸಹ ತಮ್ಮ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ತಂದೆ ತನ್ನ ಮದುವೆಗೆ ಹಾಜರಾಗುವುದನ್ನು ಕಂಡು ವಧು ಅಪಾರ ಸಂತಸ ವ್ಯಕ್ತಪಡಿಸಿದ್ದಾಳೆ. ನಂತರ ಆಕೆ ಪ್ರತಿಮೆಗೆ ಮುತ್ತು ಮತ್ತು ಅಪ್ಪುಗೆಯನ್ನು ನೀಡುತ್ತಾಳೆ.
ವಧುವಿನ ಸಹೋದರ ಅವುಲಾ ಫಣಿ ಅವರು ತಮ್ಮ ದಿವಂಗತ ತಂದೆಯ ಮೇಣದ ಪ್ರತಿಮೆಯನ್ನು ನಿರ್ಮಿಸಿ ವಧುವಿಗೆ ಅಚ್ಚರಿಯ ಉಡುಗೊರೆ ನೀಡಿದ್ದಾರೆ. ಅವರ ತಂದೆ ಕೋವಿಡ್-19 ಸೋಂಕಿಗೆ ಒಳಗಾದ ನಂತರ ನಿಧನರಾದರು. ಅವರ ತಾಯಿ ಮತ್ತು ಅವರ ದಿವಂಗತ ತಂದೆ ಅವರು ನಿವೃತ್ತರಾಗುವ ಮೊದಲು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ತಂದೆಯ ಮೇಣದ ಪ್ರತಿಮೆಯನ್ನು ಕರ್ನಾಟಕದಲ್ಲಿ ನಿರ್ಮಿಸಲಾಗಿದೆ ಮತ್ತು ಪೂರ್ಣಗೊಳಿಸಲು ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿದೆ.
https://youtu.be/Gg31wY-IjtQ