ಮದುವೆಯನ್ನು ಪವಿತ್ರ ಬಂಧವೆಂದು ಪರಿಗಣಿಸಲಾಗಿದೆ. ವಿವಿಧ ಧರ್ಮಗಳು ತಮ್ಮದೇ ಆದ ನಂಬಿಕೆ ಮತ್ತು ಆಚರಣೆಗಳನ್ನು ಹೊಂದಿವೆ. ಆದರೆ ಮದುವೆಯಾಗಲು ಹುಡುಗ, ಹುಡುಗಿಯನ್ನು ಅಪಹರಿಸಿದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗಿದೆ ಸಂಪ್ರದಾಯದ ಬಗ್ಗೆ ನಿಮಗೆ ಗೊತ್ತಾ? ಈ ವಿವಾದಾತ್ಮಕ ಸಂಪ್ರದಾಯ ಇಂಡೋನೇಷ್ಯಾದ ಸುಂಬಾ ಎಂಬ ಹೆಸರಿನ ದ್ವೀಪದಲ್ಲಿದೆ. ಒಬ್ಬ ಪುರುಷ, ಮಹಿಳೆಯನ್ನು ಇಷ್ಟಪಟ್ಟರೆ, ಆ ಮಹಿಳೆಯನ್ನು ಅಪಹರಿಸಿದ ನಂತರ ಅವಳನ್ನು ಮದುವೆಯಾಗುತ್ತಾನೆ.
ಈ ಪದ್ಧತಿ, ವಿಚಿತ್ರ ಮತ್ತು ವಿವಾದಾತ್ಮಕವಾಗಿದೆ. ಇಲ್ಲಿ ಮದುಮಗಳನ್ನು, ಮದುವೆಗಾಗಿ ಅಪಹರಿಸಲಾಗುತ್ತದೆ. ಈ ಪದ್ಧತಿ ನಿಲ್ಲಿಸಲು ಬಹಳ ಸಮಯದಿಂದ ಪ್ರಯತ್ನಗಳು ನಡೆಯುತ್ತಿವೆ. ಈ ವಿವಾದಿತ ವಿವಾಹ ಪದ್ಧತಿಯನ್ನು ಇಲ್ಲಿ ಕವಿನ್ ಟಂಕಪ್ ಎಂದು ಕರೆಯಲಾಗುತ್ತದೆ. ಈ ಅಭ್ಯಾಸ ಎಲ್ಲಿಂದ ಆರಂಭವಾಯಿತು ಮತ್ತು ಹೇಗೆ ಆರಂಭವಾಯಿತು ಎಂಬ ಬಗ್ಗೆ ಅನೇಕ ಕಥೆಗಳಿವೆ.
ಕಳೆದ ವರ್ಷ 2020 ರಲ್ಲಿ, ಬಿಬಿಸಿ ನ್ಯೂಸ್ ಮದುವೆಗಾಗಿ ಅಪಹರಿಸಲ್ಪಟ್ಟ ಮಹಿಳೆಯ ಕಥೆಯನ್ನು ಉಲ್ಲೇಖಿಸಿದೆ. ಹುಡುಗಿ ತವರಿಗೆ ವಾಪಸ್ ಬಂದಾಗ ಅಪಹರಣದ ಕಥೆ ತಿಳಿಯಿತು.
ಪಶ್ಚಿಮ ಆಫ್ರಿಕಾದಲ್ಲಿಯೂ ಇಂಥ ಪದ್ಧತಿಯಿದೆ. ಆದ್ರೆ ಇದು ಮತ್ತಷ್ಟು ಭಿನ್ನವಾಗಿದೆ. ವೊಡಾಬೆ ಬುಡಕಟ್ಟು ಜನಾಂಗದಲ್ಲಿ, ಮದುವೆಯಾಗುವ ಮೊದಲು, ಪುರುಷರು ಇನ್ನೊಬ್ಬ ವ್ಯಕ್ತಿಯ ಹೆಂಡತಿಯನ್ನು ಕದಿಯಬೇಕು. ಈ ರೀತಿ ಮದುವೆಯಾಗುವುದು ಈ ಬುಡಕಟ್ಟಿನ ಪದ್ಧತಿಯಾಗಿದೆ.