
ಮದುವೆ ಮನೆಯಲ್ಲಿ ವರ ಮತ್ತು ವಧು ಹಲವು ಸಂದರ್ಭಗಳನ್ನು ಸೃಷ್ಟಿಸಿ ವಿಡಿಯೋ ಮಾಡುವುದು ಇತ್ತೀಚಿಗೆ ಹೆಚ್ಚಾಗಿ ಕಂಡುಬರುತ್ತದೆ. ಕೆಲವೊಮ್ಮೆ ಆ ವಿಡಿಯೋ ನೋಡುವಾಗ ಇದು ನಿಜವೋ ಅಥವಾ ಸೃಷ್ಟಿಸಿದ್ದೋ ಎಂಬುದು ಗೊತ್ತಾಗುವುದಿಲ್ಲ. ಅಂಥದ್ದೊಂದು ವಿಡಿಯೋ ವೈರಲ್ ಆಗ್ತಿದೆ.
ವರದಕ್ಷಿಣೆಗಾಗಿ ಬೈಕ್ ನೀಡಲಿಲ್ಲವೆಂದು ವರ, ಮಧುವಿನ ಜೊತೆ ನೆಂಟರ ಸಮ್ಮುಖದಲ್ಲೇ ಜಗಳವಾಡಿರುವ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಹೆಚ್ಚು ಗಮನ ಸೆಳೆದಿದೆ.
ವರದಕ್ಷಿಣೆಯಾಗಿ ಬೈಕ್ ಸಿಗದಿದ್ದಕ್ಕೆ ವರ ತೀವ್ರ ನೊಂದಿದ್ದು, ವಧುವಿನ ಜೊತೆ ಅತ್ಯಂತ ಕೆಟ್ಟದಾಗಿ ನಡೆದುಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆಕೆಯೊಂದಿಗೆ ಜಗಳವಾಡುತ್ತಾ ವಧುವನ್ನು ತಳ್ಳುತ್ತಾನೆ ಮತ್ತು ಅವಳಿಗೆ ಹೊಡೆಯುತ್ತಾನೆ. ಇದರಿಂದಾಗಿ ಸಂಬಂಧಿಕರು ಕೋಪಗೊಂಡು ವಧುವನ್ನು ರಕ್ಷಿಸಲು ಮುಂದಾದ ವೇಳೆ ವರನನ್ನು ದೂರ ನೂಕುತ್ತಾರೆ.
ಈ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಕಮೆಂಟ್ ವಿಭಾಗದಲ್ಲಿ ಕೆಲವರು ಇದನ್ನು ನಿಜವೆಂಬಂತೆ ಭಾವಿಸಿದ್ದರೆ, ಮತ್ತೆ ಕೆಲವರು ವೀಡಿಯೊ ನಿಜವಲ್ಲ ಇದು ಯೋಜಿತ ಕೃತ್ಯವಾಗಿದೆ ಎಂದಿದ್ದಾರೆ.