
ವಿದೇಶದಲ್ಲಿ ನಡೆದಿರುವಂತೆ ತೋರುವ ಈ ಘಟನೆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಗಸ್ಟ್ 15ರಂದು ಅಪ್ಲೋಡ್ ಮಾಡಿರುವ ವಿಡಿಯೋ ಈಗಾಗಲೇ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಗಳಿಸಿದೆ. ವಿಡಿಯೋದಲ್ಲಿ ಕಂಡುಬರುವಂತೆ ಕ್ಷುಲ್ಲಕ ಕಾರಣಕ್ಕೆ ರೊಚ್ಚಿಗೆದ್ದ ವರ ಆಗಮಿಸಿದ್ದ ಅತಿಥಿಗಳ ಮುಂದೆಯೇ ವಧುವಿಗೆ ಗೂಸಾ ಕೊಟ್ಟಿದ್ದು ಎಲ್ಲರನ್ನೂ ಕಂಗಾಲಾಗುವಂತೆ ಮಾಡಿದೆ.
ವಿಡಿಯೋ ಆರಂಭದಲ್ಲಿ ಮದುವೆ ಸಮಾರಂಭದಲ್ಲಿ ಎಲ್ಲರೂ ಸಂತಸದಿಂದ ಭಾಗವಹಿಸಿರುವುದು ಕಂಡುಬರುತ್ತದೆ. ಮದುವೆ ಸಂದರ್ಭದಲ್ಲಿ ಸಾಮಾನ್ಯವಾಗಿ ವಧು – ವರನಿಗೆ ಗೇಮ್ಸ್ ಆಡಿಸುತ್ತಿದ್ದು, ಅದೇ ರೀತಿ ಈ ವಿಡಿಯೋದಲ್ಲಿ ಸಹ ಅವರು ಆಟವಾಡುತ್ತಿದ್ದಾರೆ. ಈ ಆಟದಲ್ಲಿ ವಧುವಿನ ಕೈ ಮೇಲಾಗಿದ್ದಂತೆ ಕಂಡುಬಂದಿದ್ದು ಆಗಮಿಸಿದ್ದ ಅತಿಥಿಗಳು ಚಪ್ಪಾಳೆ ಮೂಲಕ ಆಕೆಗೆ ಅಭಿನಂದಿಸಿದ್ದಾರೆ. ಇಷ್ಟಕ್ಕೇ ಸಿಟ್ಟಿಗೆದ್ದ ವರ ಏಕಾಏಕಿ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ.