
ಇತ್ತೀಚಿನ ಮದುವೆ ಟ್ರೆಂಡ್ ನಲ್ಲಿ ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ವಲ್ಲಿ ವಧು- ವರ ಭಿನ್ನ ಭಿನ್ನವಾಗಿ ಫೋಟೋ ಗೆ ಪೋಸ್ ಕೊಡುತ್ತಾರೆ.
ಕ್ಯಾಮೆರಾಮನ್ ಅದನ್ನು ಅತ್ಯಂತ ಸುಂದರವಾಗಿ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾರೆ. ಮದುವೆಯ ವಿಶೇಷ ದಿನದಂದು ಕ್ಯಾಮೆರಾಮನ್ ವಧು,ವರ ಸೇರಿದಂತೆ ಇಬ್ಬರನ್ನೂ ಸುಂದರವಾಗಿ ಕ್ಯಾಮೆರಾದಲ್ಲಿ ಕ್ಲಿಕ್ ಮಾಡುತ್ತಾರೆ.
ಇಂತಹ ಪ್ರಯತ್ನದಲ್ಲಿ ವಧುವಿಗೆ ತುಂಬಾ ಪರಿಚಿತರಂತೆ ಕಾಣುವ ಛಾಯಾಗ್ರಾಹಕ ವಧುವಿನ ಫೋಟೋವನ್ನ ತುಂಬಾ ಹತ್ತಿರದಿಂದ ತೆಗೆಯುವ ಪ್ರಯತ್ನದಲ್ಲಿ ಆಕೆಗೆ ಪೋಸ್ ನೀಡುವಂತೆ ಸೂಚಿಸುವಾಗ ಆಕೆಯನ್ನು ಸ್ಪರ್ಶಿಸಿದ್ದಾನೆ. ತಕ್ಷಣ ಕೆರಳಿದ ವರ ಛಾಯಾಗ್ರಾಹಕನಿಗೆ ಕಪಾಳಮೋಕ್ಷ ಮಾಡಿದ್ದಾನೆ.
ಒಂದು ಕ್ಷಣ ಮೌನವಾದ ಮದುವೆ ಮನೆಯಲ್ಲಿ ಎಲ್ಲರೂ ಶಾಕ್ ಗೆ ಒಳಗಾದರು. ಛಾಯಾಗ್ರಾಹಕ ಅದನ್ನು ಲಘುವಾಗಿ ತೆಗೆದುಕೊಂಡ ನಂತರ ನಗುತ್ತಾನೆ. ಸನ್ನಿವೇಶವನ್ನ ಹಾಸ್ಯಾಸ್ಪದವಾಗಿ ಕಂಡ ವಧು ನಗುವನ್ನು ತಡೆಯಲಾರದೇ ನೆಲಕ್ಕೆ ಕುಸಿಯುತ್ತಾಳೆ.
ಈ ವೈರಲ್ ವಿಡಿಯೋ ನೋಡಿದ ನೆಟ್ಟಿಗರು “ಕಪಾಳಮೋಕ್ಷ ಮಾಡಿದ ನಂತರ ಕ್ಯಾಮರಾ ಮ್ಯಾನ್ ನಗುವ ರೀತಿ ಅನನ್ಯವಾಗಿದೆ.” ಎಂದಿದ್ದಾರೆ.