
ಭಾರತದಲ್ಲಿ ಮದುವೆಗಳು ಅದ್ಧೂರಿಯಾಗಿ ನಡೆಯುತ್ತವೆ. ಕೆಲವು ಮದುವೆಗಳು ಐದು ದಿನಗಳ ಕಾಲ ನಡೆಯುತ್ತವೆ. ಮದುವೆ ಸಂಭ್ರಮ, ಮನೆ ತುಂಬ ಜನ, ಆಚರಣೆ ಮಧ್ಯೆ ವಧು-ವರರಿಗೆ ಆಯಾಸವಾಗುವುದು ಸಾಮಾನ್ಯ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ಮದುವೆ ಆಚರಣೆಯಲ್ಲಿ ವರ ಎಷ್ಟು ಸುಸ್ತಾಗಿದ್ದಾನೆಂಬುದು ಸ್ಪಷ್ಟವಾಗುತ್ತದೆ.
ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆದ ವಿಡಿಯೋದಲ್ಲಿ ವಧು-ವರ ವೇದಿಕೆ ಮೇಲೆ ಕುಳಿತಿದ್ದಾರೆ. ವರ ಅಲ್ಲಿಯೇ ನಿದ್ರೆಗೆ ಜಾರಿದ್ದಾನೆ. ಅಕ್ಕಪಕ್ಕದಲ್ಲಿರುವವರು ಆತನನ್ನು ಎಚ್ಚರಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಕೆಲವರು ಕೈ-ಮೈ ಮುಟ್ಟಿ ಎಚ್ಚರಗೊಳಿಸಲು ಪ್ರಯತ್ನಿಸಿದ್ರೆ ಮತ್ತೆ ಕೆಲವರು ಕೂಗ್ತಿದ್ದಾರೆ. ಆದ್ರೆ ವರ ಮಾತ್ರ ನಿದ್ರೆಯಿಂದ ಎಚ್ಚರಗೊಳ್ತಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು 2 ಲಕ್ಷ 79 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅನೇಕರು ಇದ್ರ ಬಗ್ಗೆ ಕಮೆಂಟ್ ಮಾಡಿದ್ದಾರೆ. ಕೆಲವರು ಇಂದು ರಾತ್ರಿ ವರನಿಗೆ ರೂಂ ಪ್ರವೇಶ ನಿಶಿದ್ಧವೆಂದ್ರೆ ಮತ್ತೆ ಕೆಲವರು, ತನ್ನ ಮದುವೆಯಲ್ಲೇ ವರ ಯಾಕೆ ಇಷ್ಟು ಮದ್ಯಪಾನ ಮಾಡಿದ್ದಾನೆಂದು ಪ್ರಶ್ನಿಸಿದ್ದಾರೆ.
