ಮದುವೆ ಮಂಟಪದ ವೇದಿಕೆಯಲ್ಲಿಯೇ ವರ, ವಧುವಿಗೆ ಚುಂಬನ ನೀಡಿದ್ದು ಈ ಕಾರಣಕ್ಕಾಗಿಯೇ ಮದುವೆ ಮುರಿದು ಬಿದ್ದಿರುವ ಘಟನೆ ಉತ್ತರ ಪ್ರದೇಶದ ಸಂಬಾಲ್ ನಲ್ಲಿ ನಡೆದಿದೆ.
ವಿವೇಕ್ ಅಗ್ನಿಹೋತ್ರಿ ಎಂಬ ಈ ಯುವಕ ಯುವಕ ಚುಂಬನ ನೀಡಿದ ತಪ್ಪಿಗಾಗಿ ಈಗ ಪರಿತಪಿಸುತ್ತಿರುವುದಲ್ಲದೆ ಪೊಲೀಸ್ ಠಾಣೆಯ ಮೆಟ್ಟಿಲೂ ಏರುವಂತಾಗಿದೆ.
ಈತನೊಂದಿಗೆ ವಿವಾಹವಾಗಬೇಕಿದ್ದ ಯುವತಿ, ತನ್ನ ಸ್ನೇಹಿತರೊಂದಿಗೆ ಬೆಟ್ ಕಟ್ಟಿದ್ದ ವರ ಅತಿಥಿಗಳ ಸಮ್ಮುಖದಲ್ಲಿ ನನಗೆ ಚುಂಬನ ನೀಡಿದ್ದಾನೆ. ಈಗಲೇ ಇಂತಹ ವರ್ತನೆ ತೋರಿರುವ ಈತ ಮುಂದೆ ನನ್ನನ್ನು ಹೇಗೆ ಬಾರಿಸಬಲ್ಲ ಎಂದು ಪ್ರಶ್ನಿಸಿ ವಧು ಬಹ್ಜೋಯ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ವಧುವಿನ ಕುಟುಂಬಸ್ಥರು ಆಕೆಯ ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಉಭಯ ಕುಟುಂಬಗಳು ಸಮಸ್ಯೆಯನ್ನು ತಾವುಗಳೇ ಬಗೆಹರಿಸಿಕೊಳ್ಳುವುದಾಗಿ ಹೇಳಿ ಪೊಲೀಸರ ಬಳಿ ಮುಚ್ಚಳಿಕೆ ಬರೆದುಕೊಟ್ಟು ತೆರಳಿದ್ದಾರೆ.