ರೋಮ್: ವಧುಗಳೂ ಇತ್ತೀಚಿನ ದಿನಗಳಲ್ಲಿ ತುಂಬ ಸ್ಪರ್ಧಾತ್ಮಕವಾಗುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ವಸ್ತ್ರ, ಆಭರಣಗಳು, ಮೇಕಪ್ ಇತ್ಯಾದಿಗಳ ಜತೆಗೆ ಅವರು ವಿವಾಹ ಮಂಟಪವನ್ನು ಪ್ರವೇಶಿಸುವುದರಲ್ಲೂ ಅನನ್ಯತೆಯನ್ನು ಬಯಸುತ್ತಿದ್ದಾರೆ.
ಇಲ್ಲೊಬ್ಬರು ವಧು ತನ್ನ ಹೆತ್ತವರೊಂದಿಗೆ ರಥವೇರಲಿಲ್ಲ. ಬದಲಿಗೆ, 250 ಹೀಲಿಯಂ ಬಲೂನ್‌ಗಳ ಮೇಲೆ ತೇಲುತ್ತಾ ಮಂಟಪಕ್ಕೆ ಬಂದಿಳಿದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು. ಈ ಮದುವೆ ಇಟಲಿಯಲ್ಲಿ ನಡೆದಿದೆ. ಈ ವಿವಾಹದ ವೆಡ್ಡಿಂಗ್ ಪ್ಲಾನರ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದರ ವಿಡಿಯೋ ಹಂಚಿಕೊಂಡಿದ್ದು, 40 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.
ಮನೆಯಲ್ಲೇ ಮಾಡಿ ಸಿಹಿ ಸಿಹಿ ರಸಗುಲ್ಲ
ಡೋಲ್ಕೋ ಮತ್ತು ಗಬಾನ್ನಾ ಹೆಸರಿನ ಶ್ವೇತ ವಸ್ತ್ರಗಳನ್ನು, ವಜ್ರಾಭರಣಗಳನ್ನು ಧರಿಸಿದ್ದ ಈ ವಧು ಫ್ಲಾರೆನ್ಸ್ ಹಿನ್ನೆಲೆಯಲ್ಲಿ ಅಚ್ಚ ಬಳಿಯ ಬಣ್ಣದ 250 ಬಲೂನ್‌ಗಳ ಮೇಲೆ ತೇಲುತ್ತಾ ಬರುವ ವೀಡಿಯೋ ಅತ್ಯಾಕರ್ಷಕವಾಗಿದೆ.