alex Certify ಮದುವೆ ದಿನವೇ ಬಾಯ್ ​ಫ್ರೆಂಡ್​ ಜೊತೆ ವಧು ಎಸ್ಕೇಪ್​..! ಮುಂದೆ ಆಗಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ದಿನವೇ ಬಾಯ್ ​ಫ್ರೆಂಡ್​ ಜೊತೆ ವಧು ಎಸ್ಕೇಪ್​..! ಮುಂದೆ ಆಗಿದ್ದೇನು ಗೊತ್ತಾ….?

ವಧು ತನ್ನ ಪ್ರಿಯಕರನ ಜೊತೆ ಓಡಿ ಹೋದ ಕಾರಣ ಆಕೆಯ ಸಹೋದರಿ 15 ವರ್ಷದ ಅಪ್ರಾಪ್ತೆಯ ಜೊತೆ ವರನಿಗೆ ಮದುವೆ ಮಾಡಿದ ಘಟನೆ ಓಡಿಶಾದ ಕಾಲಹಂಡಿ ಜಿಲ್ಲೆಯಲ್ಲಿ ನಡೆದಿದೆ.

ಬಾಲ್ಯ ವಿವಾಹಕ್ಕೆ ನಿಷೇಧ ಇರೋದ್ರಿಂದ ಪೊಲೀಸರು ಬಾಲಕಿಯನ್ನ ಆಕೆಯ ಪತಿಯ ಮನೆಯಿಂದ ರಕ್ಷಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜೈಪಟ್ನಾ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿರುವ ಮಾಲ್ಪಾಡಾ ಗ್ರಾಮದ ವಧು ಮಂಗಳವಾರ ಸಂಜೆ ತನ್ನ ಪ್ರಿಯತಮನ ಜೊತೆ ಓಡಿಹೋಗಿದ್ದಾಳೆ. ಮದುವೆಗೆ ಕೆಲವೇ ಗಂಟೆಗಳ ಮುಂಚೆ ವಧು ಓಡಿ ಹೋಗಿದ್ದರಿಂದ 26 ವರ್ಷದ ವರನೊಂದಿಗೆ ಆಕೆಯ ಸಹೋದರಿ ಜೊತೆ ವಿವಾಹ ನಡೆಸಲಾಗಿದೆ. ಆದರೆ ಸಹೋದರಿ ಅಪ್ರಾಪ್ತೆಯಾಗಿದ್ದರಿಂದ ಆಕೆಯನ್ನ ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

10 ನೇ ತರಗತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬಾಲಕಿಯನ್ನ ರಕ್ಷಣೆ ಮಾಡಲಾಗಿದ್ದು ಸಹೋದರನ ಕೈಗೆ ಒಪ್ಪಿಸಲಾಗಿದೆ ಎಂದು ಕಲಹಂಡಿ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸುಕಂತಿ ಬೆಹರಾ ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...