ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಸಂಭ್ರಮದ ಕ್ಷಣ. ತಮ್ಮ ಮದುವೆಗೆ ಕೆಲವರು ಸಾವಿರಾರು ಜನರನ್ನು ಆಹ್ವಾನಿಸುತ್ತಾರೆ, ಅದಕ್ಕಾಗಿ ಸಾಕಷ್ಟು ಖರ್ಚು ಕೂಡ ಮಾಡುತ್ತಾರೆ. ಆದರೆ ಇಲ್ಲೊಂದು ಜೋಡಿ, ಮದುವೆಗೆ ಖರ್ಚಾಗುವ ವ್ಯರ್ಥ ವೆಚ್ಚವನ್ನು ತಡೆಹಿಡಿದಿದ್ದಾರೆ. ಆ ದುಡ್ಡಲ್ಲಿ ಅವರೇನು ಮಾಡಿದ್ರು ಗೊತ್ತಾ..?
ಯೂಲಿಯಾ ಎಂಬಾಕೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಮದುವೆಯ ಮಾಹಿತಿಯನ್ನು ಹಂಚಿಕೊಂಡಿದ್ದಾಳೆ.
ಮದುವೆಗಾಗಿ $ 15000 ( ಸುಮಾರು 11.13 ಲಕ್ಷ ರೂ.) ವ್ಯರ್ಥವಾಗುತ್ತದೆ. ಅದಕ್ಕಾಗಿ ಅದನ್ನು ತಮಗೆಂದೇ ಖರ್ಚು ಮಾಡಲು ನಿರ್ಧರಿಸಿ, 4 ದೇಶಗಳಿಗೆ ಹನಿಮೂನ್ ತೆರಳಿದ್ದಾರೆ.
BIG NEWS: ಗರೀಬ್ ಕಲ್ಯಾಣ್ ಯೋಜನೆಯಡಿ ನ್ಯಾಯಬೆಲೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ವಿತರಣೆ, ಆರೋಪ
ಈ ಬಗ್ಗೆ ಮಾತನಾಡಿದ ಯೂಲಿಯಾ, “ಅತಿಥಿಗಳನ್ನು ರಂಜಿಸಲು ಯಾಕೋ ಮನಸ್ಸಾಗಲಿಲ್ಲ. ಸುಮ್ಮನೇ ವೇಸ್ಟ್ ಖರ್ಚು ಎಂದು ಭಾವಿಸಿ, ನಿಗದಿಯಾಗಿದ್ದ ನಮ್ಮ ದೊಡ್ಡ ಮದುವೆಯನ್ನು ರದ್ದುಗೊಳಿಸಲು ನಿರ್ಧರಿಸಿದೆವು. ಮತ್ತು ನಮ್ಮ ಇಬ್ಬರು ಉತ್ತಮ ಸ್ನೇಹಿತರನ್ನು ಕರೆದೆವು. ಬಳಿಕ ಅಂಗಡಿಗೆ ಹೋಗಿ $ 50ರ ಬಿಳಿ ಉಡುಗೆ ಖರೀದಿಸಿದ ಮೂರು ಗಂಟೆಗಳ ನಂತರ ಮದುವೆಯಾಗಿದ್ದೇವೆ” ಎಂದು ಹೇಳಿದ್ದಾರೆ.
ಮದುವೆಯಿಂದ ಉಳಿಸಿದ ಹಣದಲ್ಲಿ ತನ್ನ ಸಂಗಾತಿಯೊಂದಿಗೆ ಆಕೆ ಗ್ರೀಸ್, ಇಟಲಿ, ಹವಾಯಿ ಮತ್ತು ಮೊರೊಕ್ಕೊಗಳಿಗೆ ಪ್ರಯಾಣಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 1.8 ದಶಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಯೂಲಿಯಾ ಕಲ್ಪನೆಯಿಂದ ನೆಟ್ಟಿಗರು ಪ್ರಭಾವಿತರಾಗಿದ್ದಾರೆ. “ನೋಡಿ ನಿಮ್ಮ ಆಹಾರವನ್ನು ತಿಂದು ತೀರ್ಪು ನೀಡುವ ಜನರಿಗೆ ಮನರಂಜನೆ ನೀಡುವ ಬದಲು ಇದು ಹೆಚ್ಚು ಅರ್ಥಪೂರ್ಣವಲ್ಲವೇ?” ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ.