
ಪ್ರೇಮಸೌಧಕ್ಕೆ ಸಾಕ್ಷಿಯಾಗಿರುವ ಆಗ್ರಾದಲ್ಲೊಂದು ವಿಲಕ್ಷಣ ಪ್ರೇಮ ಘಟನೆ ನಡೆದಿದೆ. ನವವಧು ಮದುವೆಯಾದ 10 ದಿನದವರೆಗೂ ತನ್ನ ಗಂಡನೊಂದಿಗೆ ಮೊದಲ ರಾತ್ರಿ ಕಳೆಯಲು ನಿರಾಕರಿಸಿ ದೂರವಿದ್ದಳು.
ದಿನದಿಂದ ದಿನಕ್ಕೆ ವರನಿಂದ ದೂರವಿದ್ದು ಅನಾರೋಗ್ಯ, ಉಪವಾಸದ ಕಾರಣ ನೀಡುತ್ತಿದ್ದಳು. ಆದರೆ ಸತ್ಯ ತಿಳಿಯುವವರೆಗೆ ಇವೆಲ್ಲವೂ ಕಟ್ಟುಕಥೆಯೆಂದು ವರನಿಗೆ ಗೊತ್ತಾಗಿರಲಿಲ್ಲ. ಅಂತಿಮವಾಗಿ ವಾಸ್ತವ ಹೊರಬಿದ್ದಾಗ ವರನ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು
ಪತಿಗೆ ತಿಳಿಯದಂತೆ ವಧು ಬೇರೊಬ್ಬ ಪುರುಷನ ಸಂಪರ್ಕದಲ್ಲಿದ್ದಳು. ಗಂಡನೊಂದಿಗೆ ಸುಳ್ಳಿನ ಜಾಲವನ್ನು ಹೆಣೆಯುತ್ತಾ, ಅತ್ತ ತನ್ನ ಪ್ರೇಮಿ ಬಳಿ ನಿನಗಷ್ಟೇ ದೇಹ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಳು. ಮದುವೆಯಾದ ಹತ್ತನೇ ದಿನ ಆಕೆ ಪ್ರೇಮಿಯೊಂದಿಗೆ ಪರಾರಿಯಾಗಿದ್ದಳು.
ಪತ್ನಿ ದ್ರೋಹದಿಂದ ಜರ್ಜರಿತರಾದ ಪತಿ ಕಾನೂನು ಮಾರ್ಗದ ಮೂಲಕ ನ್ಯಾಯ ಕೇಳಲು ಮುಂದಾದರು. ದಾರಿ ತಪ್ಪಿದ ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯ ಒದಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ನ್ಯಾಯಕ್ಕಾಗಿ ನೊಂದ ಪತಿಯು ಫತೇಹಾಬಾದ್ ಪೊಲೀಸ್ ಠಾಣೆ ಮುಂದೆ ಹೋರಾಟ ನಡೆಸಿದ್ದಾರೆ. ಕಾನೂನಿನ ಮೂಲಕ ತನಗಾದ ನೋವಿಗೆ ಸಾಂತ್ವನ ಮತ್ತು ನ್ಯಾಯ ಕೋರಿದ್ದಾರೆ.