alex Certify ಹೈ ಹೀಲ್ಸ್ ಧರಿಸಿ ಬಾಂಗ್ರಾ ಡಾನ್ಸ್ ಮಾಡುತ್ತಾ ವರನಿಗೆ ಸವಾಲೆಸೆದ ವಧು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈ ಹೀಲ್ಸ್ ಧರಿಸಿ ಬಾಂಗ್ರಾ ಡಾನ್ಸ್ ಮಾಡುತ್ತಾ ವರನಿಗೆ ಸವಾಲೆಸೆದ ವಧು….!

ಇತ್ತೀಚೆಗಿನ ದೇಸಿ ವಿವಾಹ ಅಂದ್ರೆ ಅಲ್ಲಿ ಹಾಡು, ನೃತ್ಯ, ಮನೋರಂಜನೆ ಕಾಮನ್. ವಿವಾಹ ಪೂರ್ವ ಕಾರ್ಯಕ್ರಮದಲ್ಲೂ ಕೂಡ ವಧು-ವರ ಜೊತೆಗೇ ನೃತ್ಯ ಮಾಡುವುದು ಇತ್ತೀಚೆಗೆ ಟ್ರೆಂಡಿಂಗ್ ಆಗಿದೆ. ಇದೀಗ ವಧುವೊಬ್ಬಳು ಹೈ ಹೀಲ್ಸ್ ನಲ್ಲಿ ಮಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾಳೆ. ಬಾಂಗ್ರಾ ಡ್ಯಾನ್ಸ್ ಮಾಡುತ್ತಾ ವೇದಿಕೆಯನ್ನು ಚಿಂದಿ ಚಿತ್ರಾನ್ನ ಮಾಡಿದ್ದಾಳೆ.

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಧು ಸುಂದರವಾದ ಆಧುನಿಕ ಶೈಲಿಯ ಉಡುಪು ಧರಿಸಿ ವೇದಿಕೆಗೆ ಹೆಜ್ಜೆ ಇಟ್ಟಿದ್ದಾಳೆ. ಬಳಿಕ ಅದ್ಭುತವಾಗಿ ಸೊಂಟ ಬಳುಕಿಸಿದ ಈಕೆಗೆ ನೆರೆದಿದ್ದ ಅತಿಥಿಗಳು ಹುರಿದುಂಬಿಸಿದ್ದಾರೆ. ಈ ವೇಳೆ ವಧು ತನ್ನ ನಿಶ್ಚಿತ ವರನನ್ನು ಡ್ಯಾನ್ಸ್ ಮಾಡುವಂತೆ ಆಹ್ವಾನಿಸಿದ್ದಾಳೆ.

ವಧು ಕರೆಯುತ್ತಿದ್ದಂತೆ ನಾಚಿಕೆ ಸ್ವಭಾವದಿಂದ ವೇದಿಕೆಯತ್ತ ಬಂದ ವರ, ವಧು ಬಾಂಗ್ರಾ ಸ್ಟೆಪ್ಸ್ ಹಾಕುತ್ತಿದ್ದಂತೆ ವರ ಸವಾಲಿಗೆ ಪ್ರತಿ ಸವಾಲು ಹಾಕಿದ್ದಾನೆ. ವಧುವಿಗಿಂತಲೂ ಅದ್ಭುತವಾಗಿ ಕುಣಿದಿದ್ದಾನೆ. ಈತನ ನೃತ್ಯ ಕಂಡು ನೆರೆದಿದ್ದವರು ಬೆರಗಾಗಿದ್ದಾರೆ. ಅತಿಥಿಗಳು ಶಿಳ್ಳೆ ಹೊಡೆಯುತ್ತಾ ವರನನ್ನು ಮತ್ತಷ್ಟು ಹುರಿದುಂಬಿಸಿದ್ದಾರೆ. ಸದ್ಯ, ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...