ಮದುವೆಯಾದ ಮರುದಿನವೇ ನವವಿವಾಹಿತೆ ಮಗುವಿಗೆ ಜನ್ಮನೀಡಿದ್ದಾರೆ. ಉತ್ತರಪ್ರದೇಶದಲ್ಲಿ ಇಂತಹ ಘಟನೆಯೊಂದು ವರದಿಯಾಗಿದೆ.
ತೆಲಂಗಾಣದ ಸಿಕಂದರಾಬಾದ್‌ನ ಯುವತಿಯೊಬ್ಬರು ಗ್ರೇಟರ್ ನೋಯ್ಡಾದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಮದುವೆಯಾದ ದಿನದ ರಾತ್ರಿಯೇ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಆಕೆ ಏಳು ತಿಂಗಳ ಗರ್ಭಿಣಿ ಎಂದು ಆಕೆಯ ಪತಿ ಮತ್ತು ಆತನ ಮನೆಯವರಿಗೆ ತಿಳಿಸಿದ್ದಾರೆ. ಇಂತಹ ಶಾಕಿಂಗ್ ಸುದ್ದಿ ಕೇಳಿದ ವರನ ಮನೆಯವರು ಆಘಾತದಲ್ಲಿರುವಾಗಲೇ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ನವವಿವಾಹಿತೆ ಗರ್ಭಿಣಿಯಾಗಿದ್ದ ವಿಷಯ ಆಕೆಯ ಮನೆಯವರಿಗೆ ಗೊತ್ತಿದ್ದರೂ ಮುಚ್ಚಿಟ್ಟಿದ್ದಾರೆಂದು ಆರೋಪಿಸಲಾಗಿದೆ.
ಜೂನ್ 26ರ ಸೋಮವಾರದಂದು ಮದುವೆ ನಡೆದಿದ್ದರೆ ಜೂನ್ 27 ರಂದು ಯುವತಿ ಮಗುವಿಗೆ ಜನ್ಮನೀಡಿದ್ದಾರೆ. ಇತ್ತೀಚೆಗಷ್ಟೇ ಯುವತಿಗೆ ಸ್ಟೋನ್ ರಿಮೂವಲ್ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಇದರಿಂದ ಆಕೆಯ ಹೊಟ್ಟೆ ಊದಿಕೊಂಡಿದೆ ಎಂದು ವರನ ಸಂಬಂಧಿಕರಿಗೆ ಮಹಿಳೆಯ ಕುಟುಂಬದವರು ತಿಳಿಸಿದ್ದರಂತೆ. ಘಟನೆ ಬಗ್ಗೆ ಎರಡೂ ಕುಟುಂಬಗಳು ಒಪ್ಪಂದಕ್ಕೆ ಬಂದಿದ್ದು ಪೊಲೀಸ್ ದೂರು ದಾಖಲಾಗಿಲ್ಲ.
ವಧುವಿನ ಕಡೆಯವರು ಆಕೆಯನ್ನೂ ಮತ್ತು ಮಗುವನ್ನ ಕರೆದುಕೊಂಡು ಹೋಗಿದ್ದು, ವರನ ಕುಟುಂಬದವರು ಆಕೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.